ಕುಶಾಲನಗರ, ಮೇ 30: ಕುಶಾಲನಗರದಲ್ಲಿ ಸಮುದ್ರ ಮೀನಿಗೆ ಬೇಡಿಕೆ ಏರಿಕೆಯಾಗುವುದರೊಂದಿಗೆ ಮೀನಿನ ದರ ಕೂಡ ಗಗನಕ್ಕೇರಿರುವುದು ಕಂಡುಬಂದಿದೆ. ಕಳೆದ ಎರಡು ತಿಂಗಳಿನಿಂದ ಲಾಕ್ಡೌನ್ ಹಿನ್ನೆಲೆ ಗಡಿ ಭಾಗ ಬಂದ್ ಆದ ಹಿನ್ನೆಲೆ ಸಮುದ್ರ ಮೀನು ಸರಬರಾಜು ಸ್ಥಗಿತಗೊಂಡಿತ್ತು. ಕಳೆದ ಎರಡು ದಿನಗಳಿಂದ ಮಂಗಳೂರು ಹಾಗೂ ವೀರಾಜಪೇಟೆ ಕಡೆಯಿಂದ ಕುಶಾಲನಗರಕ್ಕೆ ಮೀನು ಸರಬರಾಜಾಗುತ್ತಿದ್ದು ಮೀನು ಪ್ರಿಯರು ಅಂಗಡಿಗಳಲ್ಲಿ ಖರೀದಿಗೆ ಮುಗಿಬಿದ್ದ ದೃಶ್ಯ ಕಂಡುಬಂತು.
ಬಂಗುಡೆ ಮೀನಿಗೆ ಕೆ.ಜಿ.ಯೊಂದಕ್ಕೆ ರೂ. 240, ಮತ್ತಿ ಮೀನಿಗೆ ಕೂಡ ರೂ. 240 ದರ ಏರಿಕೆಯಾದರೂ ಗ್ರಾಹಕರು ಈ ಬಗ್ಗೆ ತಲೆ ಕೆಡಿಸಿಕೊಳ್ಳದೆ ಖರೀದಿಯಲ್ಲಿ ತೊಡಗಿಸಿಕೊಂಡಿದ್ದರು.
- ಸಿಂಚು