ಸೋಮವಾರಪೇಟೆ,ಮೇ 31: ಪಟ್ಟಣದಿಂದ ಮಡಿಕೇರಿ ರಸ್ತೆ ಮೂಲಕ ತೆರಳುತ್ತಿದ್ದ ಬೈಕ್ ಹಾಗೂ ಪಟ್ಟಣಕ್ಕೆ ಆಗಮಿಸುತ್ತಿದ್ದ ಕಾರಿನ ನಡುವೆ ಕನ್ನಡಾಂಬೆ ವೃತ್ತದ ಬಳಿ ಮುಖಾಮುಖಿ ಡಿಕ್ಕಿ ಸಂಭವಿಸಿ, ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾದ ಘಟನೆ ಇಂದು ಸಂಜೆ ನಡೆದಿದೆ.

ಕುಮಾರಳ್ಳಿ ಬಾಚಳ್ಳಿ ಗ್ರಾಮದ ನಿವಾಸಿ ರಾಘವೇಂದ್ರ ಎಂಬವರು ಚಾಲಿಸುತ್ತಿದ್ದ ಕಾರು(ಕೆ.ಎ.12 ಬಿ. 3120) ಹಾಗೂ ಕುಸುಬೂರು ನಿವಾಸಿ ಮುತ್ತಣ್ಣ ಎಂಬವರು ಚಾಲಿಸುತ್ತಿದ್ದ ಬೈಕ್ (ಕೆ.ಎ.12 ಜೆ. 7046) ನಡುವೆ ಡಿಕ್ಕಿ ಸಂಭವಿಸಿದೆ.

ಪರಿಣಾಮ ಬೈಕ್ ಸವಾರ ಮುತ್ತಣ್ಣ ಅವರ ಬಲಗಾಲು ಮುರಿತಕ್ಕೊಳ್ಳಗಾಗಿದ್ದು, ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಸೋಮವಾರಪೇಟೆ ಪೆÇಲೀಸ್ ಠಾಣಾಧಿಕಾರಿ ಶಿವಶಂಕರ್, ಮುಖ್ಯಪೇದೆ ರಮೇಶ್ ಅವರುಗಳು ಸ್ಥಳ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.