ಮಡಿಕೇರಿ, ಮೇ 31 : ನಗರದ ರಾಣಿಪೇಟೆ ನಿವಾಸಿ ಕ್ಯಾಪ್ಟನ್ ಡಾ. ದೇವಿಪ್ರಸಾದ್ ಅವರು ಭಾರತೀಯ ಸೇನೆಯಲ್ಲಿ ಪರ್ಮನೆಂಟ್ ಕಮಿಷನ್ ಆಗಿ ಆಯ್ಕೆಯಾಗಿದ್ದಾರೆ.
ಇವರು ಪ್ರಸ್ತುತ ಭಾರತೀಯ ಸೇನೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಬಲಮುರಿಯ ಕಟ್ರತನ ತಾರ ಪ್ರಸಾದ್ ಮಂದಣ್ಣ ಮತ್ತು ಕೆ.ಆರ್. ಕಲ್ಪನಾ ದಂಪತಿಯ ಪುತ್ರ. ಡಾ. ಕೆ.ಟಿ. ದೇವಿಪ್ರಸಾದ್ ಮಡಿಕೇರಿಯ ಸಂತ ಜೋಸೆಫರ ಶಾಲೆಯಲ್ಲಿ ಪ್ರಾಥಮಿಕ ಮತ್ತು ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ಪ್ರೌಢ ಶಾಲಾ ವಿದ್ಯಾಭ್ಯಾಸವನ್ನು ಮುಗಿಸಿದ್ದಾರೆ. ತಮ್ಮ ವೈದ್ಯಕೀಯ ಶಿಕ್ಷಣವನ್ನು ಬೀದರ್ನ ವೈದ್ಯಕೀಯ ಕಾಲೇಜಿನಲ್ಲಿ ಮುಗಿಸಿದ್ದಾರೆ.