ಶಿವಣ್ಣ ಅವರಿಗೆ ಬೀಳ್ಕೊಡುಗೆ
ಮಡಿಕೇರಿ, ಮೇ 31: ಕೊಡಗು ಸಾರಿಗೆ ಪ್ರಾಧಿಕಾರ ಅಧಿಕಾರಿಯಾಗಿದ್ದು, 35 ವರ್ಷಗಳ ಸುದೀರ್ಘ ಸೇವೆಯೊಂದಿಗೆ ನಿವೃತ್ತಿ ಹೊಂದಿದ, ಸಾರಿಗೆ ಅಧೀಕ್ಷಕ ಶಿವಣ್ಣ ಅವರಿಗೆ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಆತ್ಮೀಯವಾಗಿ ಬೀಳ್ಕೊಟ್ಟರು.
ರೇವಣ್ಣವರ್
ಕೊಡಗು ಜಿಲ್ಲಾ ಪಂಚಾಯತ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರಾಗಿದ್ದು, 32 ವರ್ಷಗಳ ಇಲಾಖಾ ಸೇವೆಯಿಂದ ನಿವೃತ್ತರಾದ ರೇವಣ್ಣವರ್ ಅವರಿಗೆ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಲಕ್ಷ್ಮಿಪ್ರಿಯ, ಉಪ ಕಾರ್ಯದರ್ಶಿ ಗುಡೂರು ಭೀಮಸೇನ ಸೇರಿದಂತೆ ಇತರರು ಪಾಲ್ಗೊಂಡಿದ್ದರು.ಎಂ.ಎಲ್.ರಮೇಶ
ನಗರಸಭೆ ಆಯುಕ್ತರಾಗಿದ್ದು, 30 ವರ್ಷಗಳ ಸೇವೆಯೊಂದಿಗೆ ನಿವೃತ್ತಿ ಹೊಂದಿದ ಎಂ.ಎಲ್. ರಮೇಶ್ ಅವರಿಗೆ ಉಪವಿಭಾಗಾಧಿಕಾರಿ ಟಿ. ಜವರೇಗೌಡ ಹಾಗೂ ಯೋಜನಾ ನಿರ್ದೇಶಕ ಶ್ರೀನಿವಾಸ್ ಬೀಳ್ಕೊಟ್ಟರು.ಕಮಲಾಕ್ಷಿ ಬಿದ್ದಪ್ಪ
ಕಾವೇರಿ ಶಿಕ್ಷಣ ಸಂಸ್ಥೆಯ ಗೋಣಿಕೊಪ್ಪ ಹಾಗೂ ವೀರಾಜಪೇಟೆಯ ಕಾಲೇಜಿನಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಕರಾಗಿ ಹಾಗೂ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲರಾಗಿ 38 ವರ್ಷಗಳ ಸುದೀರ್ಘ ಸೇವೆಯಿಂದ ನಿವೃತ್ತಿ ಹೊಂದಿದ್ದ ಪ್ರೊ. ಇಟ್ಟೀರ ಕಮಲಾಕ್ಷಿ ಬಿದ್ದಪ್ಪ ಅವರಿಗೆ ಕಾಲೇಜಿನ ವತಿಯಿಂದ ಬೀಳ್ಕೊಡುಗೆ ಸಮಾರಂಭವನ್ನು ಸರಳವಾಗಿ, ಸಾಮಾಜಿಕ ಅಂತರ ಕಾಯ್ದುಕೊಂಡು ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಪ್ರೊ ಕಮಲಾಕ್ಷಿ ಅವರ ಪತಿ ಹಾಗೂ ಸಂಸ್ಥೆಯ ನಿರ್ದೇಶಕ ಪ್ರೊ. ಇಟ್ಟೀರ ಬಿದ್ದಪ್ಪ ಹಾಗೂ ಅವರ ಕುಟುಂಬ ಮತ್ತು ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಜರಿದ್ದರು.ಶಿಕ್ಷಕ ಐಮದೆ
ನಾಪೆÇೀಕ್ಲು ಸಮೀಪದ ನೆಲಜಿ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಪಿ.ಎಚ್.ಐಮದೆ ಅವರನ್ನು ಬೀಳ್ಕೊಡಲಾಯಿತು.
ನಾಪೆÇೀಕ್ಲು ಕ್ಲಸ್ಟರಿನ ಸಿಆರ್ಪಿ ಮಂಜುಳ, ಸಾರ್ವಜನಿಕ ಶಿಕ್ಷಣ ಇಲಾಖೆಯ ಬಿಆರ್ಸಿ ರಂಜಿತ್, ಮಂಜುಳ, ಜಯಮ್ಮ, ಇದ್ದರು.