ಗೋಣಿಕೊಪ್ಪಲು, ಮೇ 30: ವೀರಾಜಪೇಟೆ ಪ್ರಾದೇಶಿಕ ವಿಭಾಗದ ತಿತಿಮತಿ ಪ್ರಾದೇಶಿಕ ವಲಯದಲ್ಲಿ 2019-20ನೇ ಸಾಲಿನಲ್ಲಿ ವಿವಿಧ ಗಾತ್ರದ ಪಾಲಿಥೀನ್ ಚೀಲಗಳಲ್ಲಿ ಬೆಳೆಯಲಾದ ಸಸಿಗಳನ್ನು ಜೂನ್ 1 ರಿಂದ ದಿನಂಪ್ರತಿ 75 ಮಂದಿಗೆ ವಿತರಿಸಲಾಗುವುದು ಎಂದು ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್ ಹುನುಗುಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕರು ಅಗತ್ಯ ದಾಖಲಾತಿಗಳಾದ ಆರ್‍ಟಿಸಿ ಹಾಗೂ ಆಧಾರ್ ಕಾರ್ಡ್ ಪ್ರತಿಗಳೊಂದಿಗೆ ಅರ್ಜಿ ಸಲ್ಲಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಸಸಿಗಳನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ವಲಯ ಅರಣ್ಯಾಧಿಕಾರಿ ತಿತಿಮತಿ ವಲಯ ಮೊ. 73385 30366- ಉಪ ವಲಯ ಅರಣ್ಯಾಧಿಕಾರಿ ಮೊ. 74119 16811 ಹಾಗೂ ಕಚೇರಿ - 81052 41112 ಸಂಪರ್ಕಿಸಬಹುದು.