ಮಡಿಕೇರಿ, ಮೇ 31: ಭಾರತ ಲಾಕ್‍ಡೌನ್ ನಡುವೆ ಕೊರೊನಾ ಸೋಂಕು ತಡೆಗಟ್ಟುವ ದಿಸೆಯಲ್ಲಿ, ಕೊಡಗಿನಲ್ಲಿ ಸಿಲುಕಿಕೊಂಡಿದ್ದ 6188 ಮಂದಿಯನ್ನು ಇದುವರೆಗೆ ತಮ್ಮ ತಮ್ಮ ತವರಿಗೆ ಕಳುಹಿಸಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ಕೋವಿಡ್-19 ರ ಸಂಬಂಧ ಲಾಕ್ ಡೌನ್ ನಿಂದ ವಿವಿಧೆಡೆ ಸಿಲುಕಿರುವ ವಲಸೆ ಕಾರ್ಮಿಕರು, ಯಾತ್ರಿಗಳು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರರನ್ನು ಅವರವರ ಸ್ವಂತ ಊರುಗಳಿಗೆ ಕಳುಹಿಸುವ ಬಗ್ಗೆ ಕೇಂದ್ರ ಸರ್ಕಾರ ಒಳಾಡಳಿತ ಇಲಾಖೆಯಿಂದ ಆದೇಶವನ್ನು ಹೊರಡಿಸಿತ್ತು.

ಕರ್ನಾಟಕ ರಾಜ್ಯ ಸರ್ಕಾರದಿಂದಲೂ ಕೂಡ ಮಾರ್ಗಸೂಚಿಯನ್ನು ಹೊರಡಿಸಲಾಗಿತ್ತು. ಅದರಂತೆ ಜಿಲ್ಲಾಡಳಿತದಿಂದ ಕ್ರಮ ಕೈಗೊಂಡು ಲಾಕ್ ಡೌನ್ ನಿಂದ ಜಿಲ್ಲೆಯಲ್ಲಿ ಸಿಲುಕಿದ್ದ ಕರ್ನಾಟಕ ರಾಜ್ಯದ ಮತ್ತು ದೇಶದ ವಿವಿಧ ರಾಜ್ಯಗಳ ವಲಸೆ ಕಾರ್ಮಿಕರನ್ನು ಅವರವರ ಸ್ವಂತ ಊರುಗಳಿಗೆ ನಿಯಮಾನುಸಾರ ಸರ್ಕಾರದಿಂದ ವ್ಯವಸ್ಥೆ ಮಾಡಿದ ಬಸ್, ಶ್ರಮಿಕ್ ವಿಶೇಷ ರೈಲುಗಳ ಮುಖಾಂತರ ಕಳುಹಿಸಿಕೊಡಲಾಗಿದೆ. ಮೇಘಾಲಯ ರಾಜ್ಯದ ಕಾರ್ಮಿಕರನ್ನು ಖಾಸಗಿ ಬಸ್ ಮಾಡಿ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಇದುವರೆಗೆ ಜಿಲ್ಲೆಯಿಂದ ಕರ್ನಾಟಕ ರಾಜ್ಯದೊಳಗೆ ಮತ್ತು ದೇಶದ ವಿವಿಧ ರಾಜ್ಯಗಳಿಗೆ ಕಳುಹಿಸಿದವರ ವಿವರ ಕೆಳಕಂಡಂತಿದೆ. ಕರ್ನಾಟಕ ರಾಜ್ಯದೊಳಗೆ -1463, ತಮಿಳುನಾಡು-3082, ಅಸ್ಸಾಂ-204, ಪಶ್ಚಿಮ ಬಂಗಾಳ-477, ಒಡಿಸ್ಸಾ 32, ಮೇಘಾಲಯ-8, ಬಿಹಾರ-239, ಉತ್ತರ ಪ್ರದೇಶ-270, ಜಾರ್ಖಂಡ್-209 ಮಂದಿಯನ್ನು ಕಳುಹಿಸಲಾಗಿದೆ.

ಜಿಲ್ಲೆಯಲ್ಲಿ ಸಿಲುಕಿದ್ದ ಅಸ್ಸಾಂ ರಾಜ್ಯದ 204 ವಲಸೆ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ಇಂದು ಮೈಸೂರಿನಿಂದ ತೆರಳಿದ ವಿಶೇಷ ಶ್ರಮಿಕ್ ರೈಲು ಮೂಲಕ ಕಳುಹಿಸಿಕೊಡಲಾಯಿತು. ಇದರೊಂದಿಗೆ ಜಿಲ್ಲೆಯಲ್ಲಿ ಸಿಲುಕಿದ್ದ ವಲಸೆ ಊರುಗಳಿಗೆ ಕಳುಹಿಸಿಕೊಡುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಿದ್ದಾಪುರ ವರದಿ

ಸಿದ್ದಾಪುರ: ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಕಾರ್ಮಿಕರಾಗಿದ್ದ ಅಸ್ಸಾಂ ರಾಜ್ಯದ 23 ಕಾರ್ಮಿಕರನ್ನು ಬಸ್ಸಿನ ಮೂಲಕ ಮೈಸೂರಿಗೆ ಕಳುಹಿಸಿಕೊಡಲಾಯಿತು ನಂತರ ಅವರನ್ನು ರೈಲಿನಲ್ಲಿ ಕಾರ್ಮಿಕರ ತವರೂರಿಗೆ ಕಳುಹಿಸಿಕೊಡಲಾಯಿತು ಈ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನಿಲ್ ಕುಮಾರ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು.ಕಾರ್ಮಿಕರನ್ನು ಅವರವರ ಸ್ವಂತ