ಮಡಿಕೇರಿ, ಮೇ 29: ಲಾಕ್ಡೌನ್ ಸಮಯದ ನಡುವೆ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಲು ಮಾಧ್ಯಮ ಸ್ಪಂದನ ಬಳಗ ನೆರವಾಗಿದೆ.
ಕೇರಳ ರಾಜ್ಯದ ವಯನಾಡ್ ಜಿಲ್ಲೆಯ ಕುಟುಂಬವೊಂದು ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದು, ಈ ಕುಟುಂಬದ ಸಬಾಸ್ಟಿನ್ ಎಂಬವರು ಜನವರಿ ತಿಂಗಳಿನಲ್ಲಿ ಕೆಲಸಕ್ಕೆಂದು ಹೇಳಿ ಬೆಂಗಳೂರಿನಿಂದ ಮಂಗಳೂರಿಗೆ ತೆರಳಿದ್ದರು. ಬಳಿಕ ಫೆಬ್ರವರಿ ತಿಂಗಳಿನಲ್ಲಿ ಬೆಂಗಳೂರಿನಲ್ಲಿರುವ ಮಗಳಿಗೆ ಕರೆ ಮಾಡಿದ ಸಬಾಸ್ಟಿನ್ ತಾನು ಕೊಡಗಿನಲ್ಲಿ ಇರುವುದಾಗಿ ತಿಳಿಸಿದ್ದರು. ನಂತರದ ದಿನಗಳಲ್ಲಿ ತಂದೆಯ ಮೊಬೈಲ್ ಕರೆ ಬಾರದಿದ್ದಾಗ ಮಗಳು ತಂದೆಯ ಮೊಬೈಲ್ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಬಳಿಕ ಮಗಳು ಇಮೈಲ್ ಮೂಲಕ ಮಡಿಕೇರಿ ಪೆÇಲೀಸರಿಗೆ ದೂರು ನೀಡಿದ್ದರು.
ಬೆಂಗಳೂರಿನ ಕೆಲವು ವ್ಯಕ್ತಿಗಳನ್ನು ಸಂಪರ್ಕಿಸಿದ ಮಗಳು ನಾಪತ್ತೆ ಪ್ರಕರಣವನ್ನು ಸಿದ್ದಾಪುರದ ಪತ್ರಕರ್ತ ಎಂ.ಎ. ಅಜೀಜ್ ಅವರ ಗಮನಕ್ಕೆ ತಂದಿದ್ದರು. ಕೂಡಲೇ ಪ್ರೆಸ್ಕ್ಲಬ್ ಅಧ್ಯಕ್ಷ ಎ.ಆರ್. ಕುಟ್ಟಪ್ಪ ಅವರಿಗೆ ಮಾಹಿತಿ ನೀಡಿದ್ದರು. ತಕ್ಷಣ ಮಾಧ್ಯಮ ಸ್ಪಂದನ ವಾಟ್ಸಪ್ ಗುಂಪಿನಲ್ಲಿ ವಿಷÀಯ ತಿಳಿಸಿದ ಕುಟ್ಟಪ್ಪ ಅವರು ವ್ಯಕ್ತಿಯನ್ನು ಪತ್ತೆ ಹಚ್ಚಲು ಬಳಗದ ಸದಸ್ಯರು ಶ್ರಮ ವಹಿಸಲು ಕೋರಿದರು. ಈ ನಡುವೆ ಕೆ.ಎಂ.ಸಿ.ಸಿ. ಸಂಘಟನೆಯ ಸದಸ್ಯ ನೆಲ್ಯಹುದಿಕೇರಿಯ ಷಂಶುದ್ದೀನ್ ಎಂಬವರು ಸಿದ್ದಾಪುರದ ಪತ್ರಕರ್ತ ಎ.ಎಸ್. ಮುಸ್ತಫ ಅವರಿಗೆ ಸಬಾಸ್ಟಿನ್ ಅವರ ಮಗಳ ಮೊಬೈಲ್ ಸಂಖ್ಯೆ ನೀಡಿ, ಪತ್ರಕರ್ತರ ಮೂಲಕ ಸಹಾಯ ನೀಡುವಂತೆ ಮನವಿ ಮಾಡಿದರು.
ಮುಸ್ತಫ ಅವರು ಮಗಳಿಗೆ ಕರೆ ಮಾಡಿದಾಗ ಮಡಿಕೇರಿ ಪೆÇಲೀಸ್ ಅಧಿಕಾರಿಯ ಮೊಬೈಲ್ ಸಂಖ್ಯೆ ನೀಡಿ, ಪತ್ರಕರ್ತರ ಬಳಗದ ಸಹಾಯ ಕೋರಿದ್ದರು. ಮುಸ್ತಫ ಅವರು ಸಂಖ್ಯೆಗೆ ಕರೆ ಮಾಡಿದ್ದು ಇನ್ಸ್ಪೆಕ್ಟರ್ ಮೇದಪ್ಪ ಅವರು ಪ್ರಕರಣದ ಕುರಿತು ವಿಚಾರಣೆ ನಡೆಸುತ್ತಿರುವುದಾಗಿ ಮಾಹಿತಿ ನೀಡಿದ್ದರು. ಈ ಮಧ್ಯೆ ಸಿದ್ದಾಪುರದ ಪತ್ರಕರ್ತ ರೆಜಿತ್ ಕುಮಾರ್ ಗುಹ್ಯ ಅವರು ಕೂಡಾ ಸಬಾಸ್ಟಿನ್ ಅವರ ಕುಟುಂಬದ ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವ ಮೂಲಕ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದರು.
ಸಬಾಸ್ಟಿನ್ ಅವರನ್ನು ಪೆÇಲೀಸರು ದಕ್ಷಿಣ ಕೊಡಗಿನ ಶ್ರೀಮಂಗಲದಲ್ಲಿ ಪತ್ತೆ ಹಚ್ಚಿದರು. ಅವರು ಮೊಬೈಲ್ ಕಳೆದುಕೊಂಡಿದ್ದರಿಂದ ಪತ್ತೆ ಹಚ್ಚಲು ತಡವಾಯಿತು ಎಂದು ಪೆÇಲೀಸರು ತಿಳಿಸಿದ್ದಾರೆ. ತಂದೆಯನ್ನು ಪತ್ತೆ ಹಚ್ಚುವಲ್ಲಿ ಸಹಕಾರ ನೀಡಿದ ಮಾಧ್ಯಮ ಸ್ಪಂದನ ತಂಡದವರಿಗೆ ಸಬಾಸ್ಟಿನ್ ಅವರ ಮಗಳು ಧನ್ಯವಾದ ಸಲ್ಲಿಸಿದ್ದಾರೆ.