ನಾಪೆÉÇೀಕ್ಲು, ಮೇ 29: ಕರಿಕೆ ಸಮೀಪದ ಎಳ್ಳುಕೊಚ್ಚಿ ನಿವಾಸಿ ಹೊಸಮನೆ ಎಂ. ರಾಘವ ಎಂಬವರಿಗೆ ಸೇರಿದ ಅಡಿಕೆ ತೋಟಕ್ಕೆ ಕಾಡಾನೆಗಳ ಹಿಂಡು ಲಗ್ಗೆ ಹಾಕಿ ತೋಟದಲ್ಲಿನ ಸುಮಾರು 40ಕ್ಕೂ ಅಧಿಕ ಫಸಲು ಬಂದಿರುವ ಅಡಿಕೆ ಗಿಡಗಳು ಮತ್ತು 10ಕ್ಕೂ ಅಧಿಕ ಫಸಲಿನ ತೆಂಗಿನ ಗಿಡಗಳನ್ನು ನಾಶಪಡಿಸಿವೆ. ಎರಡು ಆನೆಗಳ ಜೊತೆಯಲ್ಲಿ ಮರಿಯಾನೆ ಸಹ ಇದ್ದು ಜನರು ಭಯಬೀತರಾಗಿದ್ದಾರೆ. ಆನೆ ದಾಳಿಯಿಂದ ರಾಘವರವರಿಗೆ ನಷ್ಟ ಸಂಭವಿಸಿದ್ದು ಅರಣ್ಯ ಇಲಾಖೆಯವರು ಕಾಡಾನೆಯನ್ನು ಇಲ್ಲಿಂದ ಓಡಿಸಲು ಕ್ರಮ ಕೈಗೊಳ್ಳಬೇಕಾಗಿಯೂ ಮತ್ತು ಆನೆ ದಾಳಿಯಿಂದ ಆದ ನಷ್ಟವನ್ನು ಕೊಡಿಸಿ ಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.