ಮಡಿಕೇರಿ, ಮೇ 29: ಹುಲಿ ದಾಳಿಯಿಂದ ತಮ್ಮ ಹಸುವನ್ನು ಕಳೆದುಕೊಂಡಿದ್ದ ವೀರಾಜಪೇಟೆ ತಾಲೂಕಿನ ಬೆಳ್ಳೂರಿನ ರೈತ ಕಳ್ಳೇಂಗಡ ದಿನೇಶ್ ಅವರಿಗೆ ಶಾಸಕ ಕೆ.ಜಿ. ಬೋಪಯ್ಯ ಅವರು ಸರಕಾರದ ಪರವಾಗಿ ಪರಿಹಾರ ವಿತರಿಸಿದರು. ವೀರಾಜಪೇಟೆ ಶಾಸಕರ ಕಚೇರಿಯಲ್ಲಿ ಶಾಸಕರು ರೂ. 10 ಸಾವಿರದ ಚೆಕ್ ಅನ್ನು ದಿನೇಶ್ ಅವರಿಗೆ ಹಸ್ತಾಂತರಿಸಿದರು.