ಕೂಡಿಗೆ, ಮೇ 29: ಸರಕಾರ ನಿಗದಿ ಮಾಡಿರುವ ಪಡಿತರ ವಸ್ತುಗಳನ್ನು ಆಯಾ ಕಾರ್ಡ್ದಾರರು ತಮ್ಮ ಕಾರ್ಡ್ನ ಅನುಗುಣವಾಗಿ ಸಮೀಪದ ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ವಸ್ತಗಳನ್ನು ಪಡೆದುಕೊಂಡು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಅನೇಕ ಪಡಿತರ ಕಾರ್ಡ್ಗಳು ಆಯಾ ನ್ಯಾಯ ಬೆಲೆ ಅಂಗಡಿಗಳಲ್ಲಿ ಬಿ.ಪಿ.ಎಲ್. ಬದಲು ಎ.ಪಿ.ಎಲ್. ಕಾರ್ಡ್ಗಳಾಗಿರುವುದು ಗಮನಕ್ಕೆ ಬಂದಿದೆ.
ಆಹಾರ ಇಲಾಖೆಯ ನಿಯಮ ಅನುಸಾರ ಸರಿಪಡಿಸಿಕೊಳ್ಳಲು ಅವಕಾಶವಿದೆ. ಪಡಿತರ ಕಾರ್ಡ್ದಾರರು ನಾಲ್ಕು ಚಕ್ರ ವಾಹನಗಳನ್ನು ಹೊಂದಿದ್ದರೆ ಅವರುಗಳ ಕಾರ್ಡ್ ಬದಲಾವಣೆ ಆಗುತ್ತಿದೆ. ಕ್ರಮಬದ್ಧವಾಗಿ ಇರುವ ಕಾರ್ಡ್ಗಳಲ್ಲಿ ದೋಷÀಗಳು ಕಂಡುಬಂದಿರುವುದನ್ನು ಆಹಾರ ಸರಬರಾಜು ಇಲಾಖೆ ಮುಖೇನಾ ಸರಿಪಡಿಸಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ. ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಒಂದೊಂದು ನ್ಯಾಯ ಬೆಲೆ ಅಂಗಡಿಗಳಲ್ಲಿ ನೂರಕ್ಕೂ ಹೆಚ್ಚು ಕಾರ್ಡ್ಗಳ ಬದಲಾವಣೆ ಆಗಿ ಗ್ರಾಮಾಂತರ ಪ್ರದೇಶದ ಜನರಿಗೆ ಪಡಿತರ ವಸ್ತುಗಳು ಇಲ್ಲದೆ ಬಹಳ ತೊಂದರೆ ಆಗುತ್ತಿದೆ ಎಂದು ಈ ವ್ಯಾಪ್ತಿಯ ಅನೇಕ ಗಾಮಸ್ಥರು ಶಾಸಕರ ಗಮನಕ್ಕೆ ತಂದ ಸಂದರ್ಭದಲ್ಲಿ ಪಡಿತರದಾರರಿಗೆ ತೊಂದರೆ ಆಗದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸ ಲಾಗುವುದು. ಅಲ್ಲದೆ ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳಲ್ಲಿ ಮತ್ತು ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ಕಾರ್ಡ್ದಾರರಿಗೆ ಬೇಕಾಗುವಷ್ಟು ಆಹಾರ ವಸ್ತು ದಾಸ್ತಾನು ಇಡಲಾಗಿದೆ. ಅದರಂತೆ ಎಲ್ಲಾ ಕಾರ್ಡ್ದಾರರಿಗೆ ಇಲಾಖೆಯ ನಿಯಮ ಅನುಸಾರ ವಸ್ತುಗಳನ್ನು ವಿತರಣೆ ಮಾಡಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ.