ಮಿತ್ರ ಅನಿಲ್ ಅವರ ಚಿಂತನೆ ಹಾಗೂ ಕೈಗೆ ಅದ್ಭುತ ಹೊಂದಾಣಿಕೆ ! ಮೆದುಳಲ್ಲಿ ಯೋಚನೆ ಹರಿಯುತ್ತಿದ್ದಂತೆಯೇ ಕೈ ಮೂಲಕ ಅದು ಬರಹಕ್ಕೆ ಬಟ್ಟಿ ಇಳಿದಿರುತ್ತದೆ.ಹಾಗಾಗಿಯೇ ನಾವು ಕಳೆದ 37 ದಿನಗಳ ಕಾಲ ‘‘ಲಾಕ್ಡೌನ್ ಡೈರಿ’’ಯನ್ನು ಕುತೂಹಲದಿಂದ ಕಾದು ಓದಲು ಸಾಧ್ಯವಾಯಿತು. ಇಂದಿಗೆ ಅದು ಮುಕ್ತಾಯಗೊಳ್ಳುತ್ತಿದೆ; ಅವರಲ್ಲಿ ಬರೆಯುವ ಉತ್ಸಾಹ ಕುಂದಿ ಅಲ್ಲ, ಬದಲು ‘‘ಲಾಕ್ಡೌನ್’’ ನಾಳೆಗೆ ಮುಗಿಯುತ್ತಿರುವುದರಿಂದ !ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಮಸ್ಯೆಗಳನ್ನು ವಿವಿಧ ಕೋನಗಳಲ್ಲಿ ಬಿತ್ತರಿಸಿದ, ಹಲವು ವಾಸ್ತವತೆಗಳನ್ನು ಓದುಗರೊಂದಿಗೆ ಮುಕ್ತವಾಗಿ ಹಂಚಿಕೊಂಡ ಮಿತ್ರನಿಗೊಂದು ಪುಟ್ಟ ನಮನ.- ಜಿ. ಚಿದ್ವಿಲಾಸ್, ಸಂಪಾದಕ.