ಪೆÇನ್ನಂಪೇಟೆ, ಮೇ 27: ಪೆÇನ್ನಂಪೇಟೆ ಹಾಗೂ ಗೋಣಿಕೊಪ್ಪ ನಡುವಿನ ಪ್ರಯಾಣಿಕರ ಪಾಲಿಗೆ ಬಹಳ ವರ್ಷಗಳಿಂದ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿರುವ ವೆಂಕಟೇಶ್ವರ ಮಿನಿ ಬಸ್ ಲಾಕ್‍ಡೌನ್ ಸಡಿಲಿಕೆಯ ನಂತರ ಕಳೆದ ನಾಲ್ಕು ದಿನಗಳಿಂದ ಸಂಚಾರ ಪ್ರಾರಂಭಿಸಿದ್ದು, ದಿನ ನಿತ್ಯ ವಿವಿಧ ಕೆಲಸಗಳಿಗೆ ಹಾಗೂ ಉದ್ಯೋಗಕ್ಕೆ ತೆರಳುವ ಸಾಮಾನ್ಯ ಜನರಿಗೆ ವರದಾನವಾಗಿದೆ.

ಕೊರೊನಾ ಹರಡುವಿಕೆ ತಡೆ ಗಟ್ಟುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಳ್ಳಲಾಗುತ್ತಿದ್ದು 42 ಆಸನ ಸಾಮಥ್ರ್ಯವಿರುವ ಬಸ್ಸಿನಲ್ಲಿ 22 ರಿಂದ 25 ಜನ ಪ್ರಯಾಣಿಸಲು ಅವಕಾಶ ಇದೆ.

ಆದರೂ ಕೂಡ ಕೊರೊನಾ ಭಯದಿಂದ ಜನ ಬಸ್‍ನಲ್ಲಿ ಪ್ರಯಾಣಿಸಲು ಹಿಂದೇಟು ಹಾಕುತ್ತಿರುವುದರಿಂದ ಒಂದು ಟ್ರಿಪ್‍ನಲ್ಲಿ 10ರಿಂದ 15 ಜನ ಪ್ರಯಾಣಿಕರು ಮಾತ್ರ ಬರುತಿದ್ದು, ಯಾವುದೇ ರೀತಿಯ ಲಾಭ ಇಲ್ಲ, ಬರುವ ಹಣ ಬಸ್ ನಿರ್ವಹಣೆಗೆ ಸಾಕಾಗುತ್ತಿದೆ.

ಪೆÇನ್ನಂಪೇಟೆ, ಗೋಣಿಕೊಪ್ಪ ಪ್ರಯಾಣಿಕರೊಡನೆ ವೆಂಕಟೇಶ್ವರ ಬಸ್‍ಗೆ ಅವಿನಾವಭಾವ ಸಂಬಂಧ ಇರುವುದರಿಂದ ಲಾಭ ಇಲ್ಲದಿದ್ದರೂ ಬಸ್ ಸಂಚಾರ ಪ್ರಾರಂಭಿಸಲಾಗಿದೆ. ಸದ್ಯಕ್ಕೆ ಒಂದು ಬಸ್ ಓಡಿಸುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರಯಾಣಿಕರು ಹೆಚ್ಚು ಸಂಖ್ಯೆಯಲ್ಲಿ ಬಂದರೆ ಇನ್ನೊಂದು ಬಸ್ ಸಂಚಾರ ಪ್ರಾರಂಭಿಸಲಾಗುವುದು ಎಂದು ವೆಂಕಟೇಶ್ವರ ಬಸ್ ಮಾಲೀಕ ರಮೇಶ್ ತಿಳಿಸಿದ್ದಾರೆ.