ಮಡಿಕೇರಿ, ಮೇ 26: ಆಸ್ತಿ ವಿವಾದ ಸಂಬಂಧ ವೀರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಚಾಮಿಯಾಲ ಗ್ರಾಮದಲ್ಲಿ ದಂಪತಿಯ ಮೇಲೆ ಹಲ್ಲೆ ನಡೆಸಿರುವ ಸಂಬಂಧ ಮೂವರು ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಾಗಿದೆ.
ಅಲ್ಲಿನ ನಿವಾಸಿಗಳಾದ ನಿಜಾಮುದ್ದೀನ್, ಹಂಸ ಹಾಗೂ ಅಶ್ರಫ್ ಈ ಮೂವರು ಆರೋಪಿಗಳು ರಶೀದ್ ಹಾಗೂ ಝಾಹೂರಾ ದಂಪತಿಯ ಮೇಲೆ ಕಲ್ಲು ಮತ್ತು ಕಬ್ಬಿಣದ ಸಲಾಕೆಯಿಂದ ಹೊಡೆದು ಗಾಯಗೊಳಿಸಿದ್ದು, ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.