ಮಡಿಕೇರಿ, ಮೇ 24: ಈ ಹಿಂದೆ ಕೊಡಗಿಗೆ ಭೇಟಿ ನೀಡಿ ಚಿಕ್ಕಮಗಳೂರಿನಲ್ಲಿ ಕೊರೊನಾ ಪಾಸಿಟಿವ್ ಎಂದು ಆಸ್ಪತ್ರೆಗೆ ದಾಖಲಾಗಿದ್ದ ವೈದ್ಯರಿಗೆ ಸೋಂಕಿಲ್ಲ ಎಂಬುದು ದೃಢಪಟ್ಟಿದೆ.
ಇದೇ ತಾ 19ರಂದು ಚಿಕ್ಕಮಗಳೂರಿನ ವೈದ್ಯರಿಗೆ ಸೋಂಕು ತಗುಲಿದೆ ಎಂದು ಪ್ರಯೋಗಾಲಯ ವರದಿ ಮಾಡಿತ್ತು. ಆದರೆ ಇದೀಗ ಪ್ರಯೋಗಾಲಯದ ಲೋಪದಿಂದಾಗಿ ತಪ್ಪು ಮಾಹಿತಿ ಬಂದಿದೆ ಎಂದು ತಿಳಿದುಬಂದಿದ್ದು ವೈದ್ಯರನ್ನು ಮನೆಗೆ ಕಳುಹಿಸಲಾಗಿದೆ ಇವರ ಸಂಪರ್ಕಕ್ಕೆ ಒಳಗಾಗಿದ್ದ 1446 ಮಂದಿಯನ್ನು ಕೂಡ ಕ್ವಾರಂಟೈನ್ ಒಳಪಡಿಸಲಾಗಿದ್ದು ಅವರು ಕೂಡ ಇದೀಗ ನಿರಾಳವಾಗಿದ್ದಾರೆ