ಮಡಿಕೇರಿ, ಮೇ 24: ನಗರದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 250 ಹಾಸಿಗೆಗಳನ್ನು ಕೋವಿಡ್-19 ರ ರೋಗಿಗಳಿಗೆ ಮೀಸಲಿಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಈ ಪೈಕಿ 150 ರಿಂದ 160 ಹಾಸಿಗೆಗಳಿಗೆ ಏಕ ಕಾಲದಲ್ಲಿ ಹೆಚ್ಚಿನ ಹರಿವಿರುವ ಆಮ್ಲಜನಕವನ್ನು ಪೂರೈಸುವ ವ್ಯವಸ್ಥೆ ಇರುತ್ತದೆ. ಜೊತೆಗೆ ಒಟ್ಟು 44.95 ಲಕ್ಷ ರೂ. ಮೊತ್ತದ ಕೇಂದ್ರೀಕೃತ ಆಕ್ಸಿಜನ್ ಪೈಪ್ ಲೈನ್ ಯೋಜನೆಗಾಗಿ ವಿಪತ್ತು ನಿಧಿಯಿಂದ 40 ಲಕ್ಷ ರೂ.ವನ್ನು ಖರ್ಚು ಮಾಡಲಾಗಿದ್ದು, 4.95 ಲಕ್ಷ ರೂ. ಮೊತ್ತವನ್ನು ತಾಜ್ ವಿವಾಂತ ಸಂಸ್ಥೆಯಿಂದ ಪ್ರಾಯೋಜಿಸಲಾಗಿದೆ. ಇದರ ಹೊರತಾಗಿ ಕೋವಿಡ್ ಆಸ್ಪತ್ರೆಯಲ್ಲಿ 11 ವೆಂಟಿಲೇಟರ್‍ಗಳ ವ್ಯವಸ್ಥೆಯೂ ಸಹ ಇರುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ.