ಮಡಿಕೇರಿ, ಮೇ 24:-ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನ ಮೊಬಿಕ್ಸ್ ಸಂಸ್ಥೆಯ ಕೊಡಗು ಘಟಕ ವತಿಯಿಂದ 14 ಸಾವಿರ ಮಾಸ್ಕ್‍ನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರಿಗೆ ನಗರದ ಜಿ.ಪಂ. ಸಭಾಂಗಣದಲ್ಲಿ ಸಂಸ್ಥೆಯ ಕೊಡಗು ಘಟಕದ ವ್ಯವಸ್ಥಾಪಕ ಸಿ. ಬೋಪಣ್ಣ ಹಸ್ತಾಂತರಿಸಿದರು. ಈ ಸಂದರ್ಭ ಶಾಸಕರು, ಸಂಸದರು, ಡಿಸಿ, ಸಿಇಒ, ಎಸ್‍ಪಿ, ಡಿಡಿಪಿಐ ಇತರರು ಇದ್ದರು.