ಕುಶಾಲನಗರ, ಮೇ 25: ಕುಶಾಲನಗರ ಪಟ್ಟಣದಲ್ಲಿ ನಡೆಯುತ್ತಿರುವ ಕಾವೇರಿ ನದಿ ನಿರ್ವಹಣೆ ಕಾಮಗಾರಿಯನ್ನು ಶಾಸಕ ಅಪ್ಪಚ್ಚುರಂಜನ್ ಪರಿಶೀಲಿಸಿದರು. ಕುಶಾಲನಗರದ ಬೈಚನಹಳ್ಳಿಯ ಮುತ್ತಪ್ಪ ದೇವಾಲಯ ಮತ್ತು ಕುಶಾಲನಗರ ಕೊಪ್ಪ ಕಾವೇರಿ ಸೇತುವೆ ಬಳಿ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಬಗ್ಗೆ ಮಾಹಿತಿ ಪಡೆದುಕೊಂಡರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಮಗಾರಿಯಿಂದ ನದಿ ತಟದ ಬಡಾವಣೆಗಳ ನಿವಾಸಿಗಳ ಆತಂಕ ದೂರಮಾಡುವ ಪ್ರಯತ್ನ ಸಾಗುತ್ತಿದೆ. ನದಿಯಲ್ಲಿರುವ ಜೆಂಡು, ಕಾಡುಗಿಡಗಂಟಿಗಳ ತೆರವಿನಿಂದ ಕೊಂಚವಾದರೂ ಪ್ರವಾಹ ಇಳಿಮುಖವಾಗುವ ಸಾಧ್ಯತೆ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಶಾಸಕ ರಂಜನ್ ಅಗತ್ಯವಿರುವವರು ನದಿಯಿಂದ ತೆಗೆಯುತ್ತಿರುವ ಮಣ್ಣನ್ನು ಅವರ ಸ್ವಂತ ಖರ್ಚಿನಲ್ಲಿ ಸಾಗಿಸುವುದರೊಂದಿಗೆ ಬಳಸಿಕೊಳ್ಳಲು ಸೂಚಿಸಿದರು.

ಈ ಸಂದರ್ಭ ನದಿ ಪ್ರವಾಹ ಸಂತ್ರಸ್ತ ವೇದಿಕೆ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಗೌರವಾಧ್ಯಕ್ಷ ಎಂ.ಎಂ. ಚರಣ್, ಖಜಾಂಚಿ ಕೊಡಗನ ಹರ್ಷ, ಉಪಾಧ್ಯಕ್ಷ ತೋರೇರ ಉದಯಕುಮಾರ್, ಪ್ರಧಾನ ಕಾರ್ಯದರ್ಶಿ ವರದ, ಬಿಜೆಪಿ ಮುಖಂಡರಾದ ವೈಶಾಖ್, ಪುಂಡರೀಕಾಕ್ಷ, ಶಿವಶಂಕರ್, ಮಂಡೇಪಂಡ ಬೋಸ್ ಮೊಣ್ಣಪ್ಪ, ಉಮಾಶಂಕರ್, ಪಪಂ ಸದಸ್ಯ ಜಯವರ್ಧನ್ ಉಪಸ್ಥಿತರಿದ್ದರು.