ಸುಂಟಿಕೊಪ್ಪ, ಮೇ 24: ಸುಂಟಿಕೊಪ್ಪ ವಿಕಾಸ್ ಜನಸೇವಾ ಟ್ರಸ್ಟ್ ಮತ್ತು ನಮ್ಮ ಸುಂಟಿಕೊಪ್ಪ ಬಳಗ, ಜೆಸಿಐ ಘಟಕ ಸುಂಟಿಕೊಪ್ಪ ಇದರ ವತಿಯಿಂದ ಇಲ್ಲಿನ ಗದ್ದೆಹಳ್ಳದ ವಿಕಾಸ್ ಜನಸೇವಾ ಟ್ರಸ್ಟಿನ ಜೀವನದಾರಿ ಆಶ್ರಮದ ಆವರಣದಲ್ಲಿ ಕೊರೊನಾ ವಾರಿಯರ್ಸ್‍ಗೆÀ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಯಿತು.

ಕೊರೊನಾ ವಾರಿಯರ್ಸ್ ಆದಂತಹ ಅಂಗನವಾಡಿ ಕಾರ್ಯಕರ್ತೆಯರಿಗೆ (ಸುಂಟಿಕೊಪ್ಪ ವೃತ್ತ) ಪ್ರಶಂಸನಾ ಪತ್ರ ನೀಡುವುದರ ಮೂಲಕ ಅಭಿನಂದಿಸಲಾಯಿತು. ಇದರ ಜೊತೆಗೆ ಗೃಹ ರಕ್ಷಕದಳದ ಸಿಬ್ಬಂದಿ ಜಾರ್ಜ್ ಮತ್ತು ರಮೇಶ್ ಅವರನ್ನು ಮತ್ತು ಸುಂಟಿಕೊಪ್ಪ ಅಂಚೆ ಕಚೇರಿ ಪೋಸ್ಟ್ ಮ್ಯಾನ್ ಸಂದೀಪ್ ಅವರನ್ನು ಈ ಸಂದರ್ಭ ಅಭಿನಂದಿಸಲಾಯಿತು. ಕಾರ್ಯಕ್ರಮ ದಲ್ಲಿ ಅತಿಥಿಯಾಗಿ ಆಗಮಿಸಿದ್ದ ಕೊಡಗು ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಅರುಂಧತಿ ಮಾತನಾಡಿ, ಜಿಲ್ಲೆಯಲ್ಲಿ ನಮ್ಮ ಕಾರ್ಯಕರ್ತೆಯರನ್ನು ಗುರುತಿಸಿ ಅಭಿನಂದಿಸಿದ ಮೂರು ಸಂಘ-ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸಿದರು.

ಗುಡ್ಡಗಾಡು ಪ್ರದೇಶದಲ್ಲಿ ಎಲ್ಲಾ ಮಕ್ಕಳ ಮನೆ ಮನೆಗೆ ಪೌಷ್ಟಿಕ ಆಹಾರವನ್ನು ತಲುಪಿಸಿ ಸಮೀಕ್ಷೆಗಳನ್ನು ಮಾಡುವುದರ ಮೂಲಕ ಸರ್ಕಾರದ ಆದೇಶವನ್ನು ಪಾಲಿಸುತ್ತ ದುಡಿಯುತ್ತಿರುವ ಕಾರ್ಯಕರ್ತೆಯರನ್ನು ಶ್ಲಾಘಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಸ್‍ಮೇರಿ, ಗ್ರಾಮ ಪಂಚಾಯಿತಿ ಪಿಡಿಓ ವೇಣು ಗೋಪಾಲ್ ಹಾಜರಿದ್ದರು.

ಸುಂಟಿಕೊಪ್ಪ ಜೆಸಿಐನ ಸಹ ಕಾರ್ಯದರ್ಶಿಯಾದ ಸ್ವಸ್ಥ ಶಾಲೆಯ ಸಿಬಿಆರ್ ಸಂಯೋಜಕ ಮುರುಗೇಶ್ ಅವರನ್ನು ನಮ್ಮ ಸುಂಟಿಕೊಪ್ಪ ಬಳಗ ದಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಿಕಾಸ್ ಜನಸೇವಾ ಟ್ರಸ್ಟಿನ ಜೀವನದಾರಿ ಆಶ್ರಮದ ನಿವಾಸಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಉಚಿತವಾಗಿ ಮಾಸ್ಕ್ ಗಳನ್ನು ನೀಡಲಾಯಿತು. ಸೋಮವಾರಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಣ್ಣಯ್ಯ, ಮಡಿಕೇರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೋಭ, ರಂಜಿತ್, ಅಧ್ಯಕ್ಷರು, ನಮ್ಮ ಸುಂಟಿಕೊಪ್ಪ ಬಳಗ, ರಮೇಶ್ ಹೆಚ್.ಕೆ. ಅಧ್ಯಕ್ಷರು, ಜೆಸಿಐ ವಿಕಾಸ್ ಜನಸೇವಾ ಟ್ರಸ್ಟ್ ಜೀವನದಾರಿ ಆಶ್ರಮ, ಸುಂಟಿಕೊಪ್ಪ ಹಾಗೂ ನಮ್ಮ ಸುಂಟಿಕೊಪ್ಪ ಬಳಗದ ಕಾರ್ಯದರ್ಶಿ ಅನಿಲ್ ಮತ್ತು ಸದಸ್ಯರು, ಜೆಸಿಐನ ದೇವಿಪ್ರಸಾದ್, ಡೆನಿಸ್, ಅರುಣ್, ಸಿ.ಬಿ. ಪ್ರಕಾಶ್ ಮತ್ತು ಸದಸ್ಯರು, ಸುಂಟಿಕೊಪ್ಪದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಜೆಸಿ. ಜಾಹಿದ್ ಸ್ವಾಗತಿಸಿ, ಜೆಸಿ. ಮುರುಗೇಶ್ ನಿರೂಪಿಸಿದರು.