ಶನಿವಾರಸಂತೆ, ಮೇ 24: ಶ್ರೀ ರಾಮಕೃಷ್ಣ ಸೇವಾಶ್ರಮ ಪೊನ್ನಂಪೇಟೆ ವತಿಯಿಂದ ಕೊಡಗು ಜಿಲ್ಲಾ ವೀರಶೈವ ಲಿಂಗಾಯಿತ ಜಂಗಮರು, ಅರ್ಚಕರು ಮತ್ತು ಪುರೋಹಿತರುಗಳಾದ 90 ಮಂದಿಗೆ ಗುಡುಗಳಲೆಯ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಶ್ರೀ ಭೋದಸ್ವರೂಪಾ ನಂದಾಜೀ ಮಹಾರಾಜ್ ಅವರು ಆಹಾರ ಕಿಟ್ ವಿತರಣೆ ಮಾಡಿದರು.

ಕೊರೊನಾ ವೈರಸ್‍ನಿಂದ ಇಂದು ವಿಶ್ವವೇ ತತ್ತರಿಸುತ್ತಿದೆ. ಯಾರು ಕಷ್ಟದಲ್ಲಿರುತ್ತಾರೋ ಅವರಿಗೆ ಸಹಾಯ ಮಾಡುವುದು ಮಾನವ ಧರ್ಮ ಎಂದರು. ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧ್ಯಕ್ಷ ಶ್ರೀ ಸದಾಶಿವ ಮಹಾಸ್ವಾಮಿ, ಕೊಡ್ಲಿಪೇಟೆ ಕಲ್ಲುಮಠಾಧ್ಯಕ್ಷ ಶ್ರೀ ಮಹಾಂತ ಮಹಾಸ್ವಾಮಿ, ಮೋಹನ್ ಶಾಸ್ತ್ರಿ, ವೀರಶೈವ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಜಿ.ಎಂ. ಕಾಂತರಾಜ್, ವೀರಶೈವ ಮಹಾಸಭಾ ಅಧ್ಯಕ್ಷ ಹಾಲಪ್ಪ, ಆಹಾರ ಕಿಟ್ ವಿತರಣಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.

ಗುಡುಗಳಲೆ ಶ್ರೀ ಬಸವೇಶ್ವರ ದೇವಸ್ಥಾನದ ಅಧ್ಯಕ್ಷ ಡಿ.ಬಿ. ಧರ್ಮಪ್ಪ, ಆಡಳಿತ ಮಂಡಳಿ ಸದಸ್ಯರುಗಳು ಹಾಗೂ ಕೊಡಗು ಜಿಲ್ಲಾ ವ್ಯಾಪ್ತಿಯ ದೇವಸ್ಥಾನಗಳ ಆಡಳಿತ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶಿಡಿಗಳಲೆ ಮಠಾಧ್ಯಕ್ಷ ಶ್ರೀ ಇಮ್ಮಡಿ ಶಿವಲಿಂಗ ಮಹಾಸ್ವಾಮಿ ಸ್ವಾಗತಿಸಿ, ಜಿ.ಎಂ. ಕಾಂತರಾಜ್ ವಂದಿಸಿದರು.