ಶನಿವಾರಸಂತೆ, ಮೇ 22: ಇಲ್ಲಿನ ಗ್ರಾಮ ಪಂಚಾಯಿತಿ ಮಳಿಗೆಗಳಲ್ಲಿ ಇರುವ ವ್ಯಾಪಾರಿಗಳಿಗೆ ಪಾನಿಪೂರಿ ಪಾರ್ಸೆಲ್ ವ್ಯಾಪಾರ ವ್ಯವಸ್ಥೆಗೆ ಅವಕಾಶ ಕಲ್ಪಿಸಿದ್ದು ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಿಲ್ಲ ಇದು ಅನ್ಯಾಯ ಎಂದು ಕ.ರ.ವೇ. ತಾಲೂಕು ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಹಾಗೂ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಟ್ಟಣದಲ್ಲಿ ಈಗಾಗಲೇ ಬಸ್ ನಿಲ್ದಾಣ ಹಾಗೂ ಕಾನ್ವೆಂಟ್ ರಸ್ತೆಯಲ್ಲಿರುವ ಅಂಗಡಿಗಳಲ್ಲಿ ಪಾನಿಪೂರಿ ಪಾರ್ಸೆಲ್ ವ್ಯಾಪಾರ ನಡೆಯುತ್ತಿದೆ. ಅಂಗಡಿ ಮಳಿಗೆಯಲ್ಲಿ ಇರುವವರಿಗೊಂದು ಕಾನೂನು, ಬೀದಿ ಬದಿ ವ್ಯಾಪಾರಿಗಳಿಗೊಂದು ಕಾನೂನೇ? ಈ ರೀತಿ ತಾರತಮ್ಯ ಭಾವನೆ ಸಲ್ಲದು. ಗ್ರಾಮ ಪಂಚಾಯಿತಿಯವರು ಬೀದಿ ಬದಿ ವ್ಯಾಪಾರಿಗಳಿಗೂ ಅವರ ಜೀವನ ನಿರ್ವಹಣೆಗಾಗಿ ಅವಕಾಶ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.