ಗೋಣಿಕೊಪ್ಪಲು, ಮೇ 22: ಮತ್ತೊಬ್ಬರ ಕಷ್ಟದಲ್ಲಿ ಭಾಗಿಯಾಗುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕೆಂದು ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ. ಬೋಪಣ್ಣ ಅಭಿಪ್ರಾಯಪಟ್ಟರು.

ಗೋಣಿಕೊಪ್ಪ ಮಾರುಕಟ್ಟೆ ವರ್ತಕರ ಹಾಗೂ ಕೆಲಸಗಾರರ ಸಂಘದಿಂದ ಆಯೋಜನೆಗೊಂಡಿದ್ದ 500 ಬಡ ಕುಟುಂಬಗಳಿಗೆ ತರಕಾರಿ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಾರ್ಕೆಟ್ ಸಮಿತಿಯವರು ಕಷ್ಟದಲ್ಲಿರುವ ಬಡ ಕುಟುಂಬಗಳನ್ನು ಗುರುತಿಸಿ ಸಹಾಯ ಮಾಡುತ್ತಾ ಬಂದಿದೆ ಎಂದರು.

ನಗರದ ಮಾರುಕಟ್ಟೆ ಆವರಣದಲ್ಲಿ ಮಾರ್ಕೆಟ್ ವರ್ತಕರ ಹಾಗೂ ಕೆಲಸಗಾರರ ಸಂಘದ ಅಧ್ಯಕ್ಷ ಎಂ.ಆರ್. ರಫೀಕ್ ಅಧ್ಯಕ್ಷತೆಯಲ್ಲಿ ಆಯೋಜನೆಗೊಂಡಿದ್ದ ಕಾರ್ಯ ಕ್ರಮದಲ್ಲಿ ಆಯ್ದ ಆಟೋರಿಕ್ಷಾ ಚಾಲಕರು, ಟ್ಯಾಕ್ಸಿ ಚಾಲಕರು, ಹೋಂಗಾರ್ಡ್‍ಗಳು ಸೇರಿದಂತೆ ಪಂಚಾಯಿತಿ ವ್ಯಾಪ್ತಿಯ 8 ವಾರ್ಡ್‍ಗಳ ಬಡ ಕುಟುಂಬಗಳಿಗೆ 500 ತರಕಾರಿ ಕಿಟ್‍ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಫಿ ಮುಸ್ಲಿಂ ಜಮಾಅತ್‍ನ ಪ್ರಧಾನ ಕಾರ್ಯದರ್ಶಿ ಹಕೀಮ್, ಮಾರ್ಕೆಟ್ ಸಮಿತಿಯ ಪದಾಧಿಕಾರಿಗಳಾದ ಪಿ.ಎ. ರಶೀದ್, ಅಬ್ದುಲ್ ಸಮ್ಮದ್, ಎಂ.ಪಿ. ಅಶ್ರಫ್, ಎಂ.ಎ. ಅಸ್ಗರ್, ಆರ್.ವಿ. ಸಲೀಮ್, ಎಸ್.ಆರ್. ರಹೀಂ, ಎಂ. ಮುಸ್ತಫಾ, ಬಿ.ಎ. ಅಸ್ಸಿ, ಎಂ.ಎಸ್. ಅರುಣ್, ಸಿ. ಮುಜೀಬ್, ಪಿ.ಆರ್. ರಹೀಮ್, ಟಿ.ಎ. ಮುಸ್ತಫಾ, ಹನ್ಸಿ ಹಾಗೂ ಆಟೋಚಾಲಕರ ಸಂಘದ ಉಪಾಧ್ಯಕ್ಷ ಜಪ್ಪು ಸುಬ್ಬಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.