ಮಡಿಕೇರಿ, ಮೇ 22: ಮುಂಗಾರು ಸಂದರ್ಭದಲ್ಲಿ ಪ್ರವಾಹ ಸಂಭವಿಸಿದಾಗ ಎದುರಿಸುವಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಕೊಡಗು ಜಿಲ್ಲಾ ಅಗ್ನಿಶಾಮಕ ಇಲಾಖೆ ವತಿಯಿಂದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪಿ.ಚಂದನ್ ಅವರ ನೇತೃತ್ವದಲ್ಲಿ ಕೂಟುಹೊಳೆ ಬಳಿ ಶುಕ್ರವಾರ ಪೂರ್ವಾಭ್ಯಾಸ ನಡೆಯಿತು.