ಮಡಿಕೇರಿ, ಮೇ 22: 2019-20ನೇ ಸಾಲಿಗೆ ರಾಜ್ಯದ ರೈತರಿಗೆ ಪತ್ತಿನ ಸಹಕಾರಿ ಸಂಸ್ಥೆಗಳು ಶೂನ್ಯ ಬಡ್ಡಿದರಲ್ಲಿ ರೂ. 3ಲಕ್ಷದ ತನಕ ಅಲ್ಪಾವಧಿ ಕೃಷಿ ಸಾಲ ವಿತರಣೆ ಸೇರಿದಂತೆ ಸಾಲ ಯೋಜನೆ ಕುರಿತಾಗಿ ಹೊಸ ಷರತ್ತುಗಳನ್ನು ವಿಧಿಸಿ ಮಾರ್ಚ್ 30 ರಂದು ಸರಕಾರ ಸುತ್ತೋಲೆ ಹೊರಡಿಸಿ ರೈತರಲ್ಲಿ ಗೊಂದಲ ಮೂಡಿಸಿದ್ದ ಸುತ್ತೋಲೆಯನ್ನು ಸರಕಾರ ಇದೀಗ ಹಿಂಪಡೆದಿದೆ.
ಈ ಹಿಂದಿನ ಸುತ್ತೋಲೆಗೆ ಸಂಬಂಧಿಸಿದಂತೆ, ಡಿಸಿಸಿ ಬ್ಯಾಂಕ್ನ ಅಧ್ಯಕ್ಷರುಗಳು, ಸಹಕಾರ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿ ಸಲ್ಲಿಸಿದ್ದ ಮನವಿಯನ್ನು ಸಹಕಾರ ಇಲಾಖೆ ಪುರಸ್ಕರಿಸಿದೆ. ಮಾ. 30ರ ಸುತ್ತೋಲೆಯ ಷರತ್ತುಗಳನ್ನು ಪಾಲಿಸುವದು ಕಷ್ಟಸಾಧ್ಯವಾಗಿರುವದರಿಂದ ಇದನ್ನು ಹಿಂಪಡೆಯಲಾಗಿದೆ ಎಂದು ಸಹಕಾರ ಇಲಾಖೆಯ ಜಂಟಿ ಕಾರ್ಯದರ್ಶಿ ಕೆ.ಎಂ. ಆಶಾ ಆದೇಶ ಹೊರಡಿಸಿದ್ದಾರೆ.ದಿನಾಂಕ 30-03-2020 ರಂದು ಸರಕಾರವು ಸಹಕಾರ ಸಂಘಗಳ 2019-2020 ರ ಅವದಿಗೆ ನೀಡಿದ ಹಾಗೂ 2020-2021ಕ್ಕೆ ನೀಡುವ ಫಸಲು ಎತ್ತಾವಳಿ ಸಾಲಕ್ಕೆ ಹಲವು ಷರತ್ತುಗಳನ್ನು ವಿಧಿಸಿ ಕುಟುಂಬದ ಒಬ್ಬ ವ್ಯಕ್ತಿ ಮಾತ್ರ ಶೂನ್ಯ ಬಡ್ಡಿದರದಲ್ಲಿ 3 ಲಕ್ಷದ ಸಾಲಕ್ಕೆ ಅರ್ಹರು ಎಂದು ಆದೇಶ ಹೊರಡಿಸಿತ್ತು ರಾಜ್ಯಾದ್ಯಂತ ರೈತರು ಇದನ್ನು ವಿರೋಧಿಸಿದರು. ಕೊಡಗು ಜಿಲ್ಲೆಯಲ್ಲಿಯೂ ಕರ್ನಾಟಕ ರಾಜ್ಯ ರೈತ ಸಂಘ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಮುಖ್ಯಮಂತ್ರಿ , ಸಹಕಾರ ಸಚಿವರಿಗೆ ಪತ್ರ ಬರೆದಿದ್ದರು. ಕೊಡಗಿನ ಶಾಸಕರಾದ ಕೆ. ಜಿ. ಬೊಪಯ್ಯ, ಅಪ್ಪಚ್ಚುರಂಜನ್ ಮೂಲಕ ಮಂತ್ರಿಗಳಿಗೆ ಒತ್ತಡ ಹಾಕಿ ಮತ್ತು ಕೃಷಿ ಸಚಿವರು ಜಿಲ್ಲೆಗೆ ಬೇಟಿ ನೀಡಿದ ಸಂದರ್ಭದಲ್ಲಿ ಮನವಿ ಸಲ್ಲಿಸಿದ ಮೇರೆಗೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ್ಷ ಬಡಗಲಪುರ ನಾಗೇಂದ್ರ ಜಿಲ್ಲೆಯ ಮನು ಸೋಮಯ್ಯ ಸೇರಿ ರಾಜ್ಯ ಸಮಿತಿಯು ಸಹಕಾರ ಸಚಿವರೊಡನೆ ಹಾಗೂ ಮುಖ್ಯಮಂತ್ರಿಗಳ ಜೊತೆ ನಡೆಸಿದ ಮಾತುಕತೆ ಹಾಗೂ ಬೆಂಬಿಡದ ಪ್ರಯತ್ನದಿಂದ ಸರಕಾರವು ಈ ಆದೇಶ ಹೊರಡಿಸಿದೆ. ಆದರೆ ಕೆಲವೊಂದು ಷರತ್ತುಗಳನ್ನು ಈ ವಿಚಾರದಲ್ಲಿ ವಿಧಿಸಲಾಗಿದೆ.
ಷರತ್ತುಗಳು : ಈ ಯೋಜನೆಯ ಗೊತ್ತುಪಡಿಸಿದ ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳು ಅಂದರೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳು, ಟಿಬೇಟಿಯನ್ ಸಹಕಾರ ಸಂಸ್ಥೆಗಳು, ಕೃಷಿ ಮತ್ತು ಕೃಷಿ ಸಂಬಂಧಿಸಿ ಅಲ್ಪಾವಧಿ ಸಾಲಗಳನ್ನು ನೀಡುತ್ತಿರುವ ಲ್ಯಾಂಪ್ಸ್ ಸಹಕಾರ ಸಂಘಗಳು, ಪಿಕಾರ್ಡ್ ಬ್ಯಾಂಕುಗಳು ಮತ್ತು ಸಹಕಾರ ಸಂಘಗಳ ನಿಬಂಧಕರು ಈ ಯೋಜನೆಯಡಿ ಅರ್ಹ ಎಂದು ಗುರುತಿಸುವ ಇತರೆ ಸಹಕಾರಿ ಸಂಸ್ಥೆಗಳು. (ಪಟ್ಟಣ ಸಹಕಾರ ಬ್ಯಾಂಕುಗಳು ನೀಡುವ ಸಾಲಗಳಿಗೆ ಈ ಯೋಜನೆ ಅನ್ವಯಿಸುವುದಿಲ್ಲ.)
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಸ್ಥಗಿತ, ಸಮಾಪನೆಗೊಂಡಿದ್ದಲ್ಲಿ ಅಂತಹ ಕಾರ್ಯವ್ಯಾಪ್ತಿಯಲ್ಲಿ ಮಾತ್ರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ಗಳು ಅಲ್ಪಾವಧಿ ಕೃಷಿ ಸಾಲಗಳನ್ನು ವಿತರಿಸತಕ್ಕದ್ದು. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು ನೇರವಾಗಿ ವಿತರಿಸಿದ ಸಾಲಗಳಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಅನ್ವಯವಾಗುವ ಬಡ್ಡಿ ಸಹಾಯಧನದ ದರಕ್ಕಿಂತ ಶೇ. 2 ರಷ್ಟು ಕಡಿಮೆ ಬಡ್ಡಿ ಸಹಾಯಧನ ಅನ್ವಯವಾಗುವದು. ಒಂದು ನಿರ್ದಿಷ್ಟ ಬ್ಯಾಂಕಿನ ವ್ಯಾಪ್ತಿಯ ಒಂದು ಪ್ರಾಥಮಿಕ
(ಮೊದಲ ಪುಟದಿಂದ) ಕೃಷಿ ಪತ್ತಿನ ಸಹಕಾರ ಸಂಘ ತನ್ನ ವ್ಯಾಪ್ತಿಯ ರೈತರಿಗೆ ಸಾಲ ವಿತರಿಸಲು ವಿಫಲವಾದಲ್ಲಿ ಅಂತಹ ಪ್ರಕರಣಗಳಲ್ಲಿ ಪಕ್ಕದ ಜಿಲ್ಲೆಯ ಕೇಂದ್ರ ಸಹಕಾರ ಬ್ಯಾಂಕಿನ ಅಥವಾ ಅಪೆಕ್ಸ್ ಬ್ಯಾಂಕಿನ ಮೂಲಕ ಸಾಲ ವಿತರಿಸುವ ವ್ಯವಸ್ಥೆಯನ್ನು ಸಹಕಾರ ಸಂಘಗಳ ನಿಬಂಧಕರು ಮಾಡಲು ಕ್ರಮವಹಿಸತಕ್ಕದ್ದು.
ಸ್ಕೇಲ್ ಆಫ್ ಫೈನಾನ್ಸ್ ಮತ್ತು ಬೆಳೆ ವಿಮೆ ಆಧಾರದ ಮೇಲೆ ಮಂಜೂರಾದ ಸಾಲದ ಮಿತಿಗೆ ಮಾತ್ರ ಬಡ್ಡಿ ರಿಯಾಯಿತಿಯು ಅನ್ವಯವಾಗುವದು. ಇತರೆ ಉದ್ದೇಶಗಳಿಗೆ (ಉದಾ: Posಣ hಚಿಡಿvesಣ ಉದ್ದೇಶಗಳು ಇತ್ಯಾದಿಗಳಿಗೆ ನೀಡುವ ಹೆಚ್ಚುವರಿ ಸಾಲಗಳಿಗೆ ಬಡ್ಡಿ ರಿಯಾಯಿತಿಯು ಇರುವುದಿಲ್ಲ.) ಬೆಳೆ ವಿಮೆ ಯೋಜನೆಯಡಿಯಲ್ಲಿ ಘೋಷಣೆ ಮಾಡಿದ ಬೆಳೆಗೆ ಸಾಲ ಪಡೆದ ರೈತರಿಗೆ ಯಾವುದೇ ಹಂಗಾಮಿನಲ್ಲಿ ಸಾಲ ವಿತರಿಸಿದ್ದರೂ ಸಹ, ಬೆಳೆ ವಿಮೆ ಹಂಗಾಮಿನಲ್ಲಿ ಕಡ್ಡಾಯವಾಗಿ ಬೆಳೆ ವಿಮೆ ಪ್ರೀಮಿಯಂನ್ನು ಪಾವತಿಸಿರಬೇಕು. ಕೇಂದ್ರ ಸರ್ಕಾರದಿಂದ ಸಂಘಗಳಿಗೆ ನೀಡಲಾಗಿರುವ ಸಬವೆಷನ್ಸ್ ಮತ್ತು ರೈತರಿಗೆ ನೀಡಲಾಗಿರುವ ಪ್ರೋತ್ಸಾಹಧನವನ್ನು ರಾಜ್ಯ ಸರ್ಕಾರದ ಯೋಜನೆಗೆ ಅಳವಡಿಸಿಕೊಂಡು ಪ್ರತ್ಯೇಕವಾಗಿ ಬಡ್ಡಿ ಸಹಾಯಧನದ ದರವನ್ನು ನಿಗಧಿಪಡಿಸಲಾಗುವದು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ಗಳಿಂದ ಮಂಜೂರಾದ ಶೇ. 50 ರಷ್ಟು ಹೆಚ್ಚುವರಿ ಸಾಲದ ಮೊತ್ತವನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ರಿಯಾಯಿತಿ ಬಡ್ಡಿ ದರದಲ್ಲಿ ಇರುವರೆಗೂ ಸಾಲ ಪಡೆಯದೇ ಇರುವ ಹೊಸ ಸದಸ್ಯರಿಗೆ ನೀಡುವುದು. ಪ್ಯಾಕ್ಸ್ಗಳ ಕಾರ್ಯ ವ್ಯಾಪ್ತಿಯಲ್ಲಿನ ಎಲ್ಲಾ ಹೊಸ ರೈತ ಸದಸ್ಯರಿಗೆ ಸಾಲ ನೀಡಿದ ನಂತರ ಉಳಿದಲ್ಲಿ ಹೆಚ್ಚುವರಿ ಸಾಲದ ಮೊತ್ತವನ್ನು ಹಳೆಯ ಸಾಲಗಾರ ರೈತರಿಗೆ ಸಾಲ ನೀಡಲು ಬಳಸತಕ್ಕದ್ದು. ಸಾಲ ನೀಡುವ ಸಂಸ್ಥೆಗಳು ಪ್ರಾಥಮಿಕ ಸಹಕಾರಿ ಸಂಸ್ಥೆಗಳಿಂದ ಮತ್ತು ಪ್ರಾಥಮಿಕ ಸಹಕಾರಿ ಸಂಸ್ಥೆಗಳು ರೈತ ಸದಸ್ಯರಿಂದ ಯಾವುದೇ ಪ್ರಕ್ರಿಯಾ ಶುಲ್ಕ ಅಥವಾ ಸೇವಾ ಶುಲ್ಕ ಹೆಸರಿನಲ್ಲಿ ಯಾವುದೇ ಹಣವನ್ನು ಸಂಗ್ರಹಿಸತಕ್ಕದ್ದಲ್ಲ.
‘ಶೂನ್ಯ’ ಬಡ್ಡಿ ದರವು ರೂ. 3 ಲಕ್ಷದವರೆಗಿನ ಸಾಲಗಳಿಗೆ ಮಾತ್ರ ಅನ್ವಯವಾಗುತ್ತದೆ. ರೂ. 3 ಲಕ್ಷಗಳಿಗಿಂತ ಹೆಚ್ಚಿನ ಸಾಲಗಳ ಸಂಪೂರ್ಣ ಮೊತ್ತಕ್ಕೆ ಸಾಮಾನ್ಯ ಬಡ್ಡಿ ದರ ಅನ್ವಯವಾಗುತ್ತದೆ. ಈ ಬಡ್ಡಿ ದರವು ದಿನಾಂಕ: 1.4.2019 ರಿಂದ ದಿನಾಂಕ: 31.3.2020ರವರೆಗೆ ನೀಡಲಾದ (Sಚಿಟಿಛಿಣioಟಿeಜ ಚಿಟಿಜ ಜisbuಡಿseಜ) ಕೃಷಿ ಅಲ್ಪಾವಧಿ ಸಾಲಗಳಿಗೆ ಮಾತ್ರ ಅನ್ಯವಾಗುತ್ತದೆ. ರೈತರು ಸಹಕಾರಿ ಸಂಸ್ಥೆಗಳಿಗೆ ಮರುಪಾವತಿ ಗಡುವಿನೊಳಗಾಗಿ ಮರುಪಾವತಿಸಿದರೆ ಮಾತ್ರ ಈ ಸೌಲಭ್ಯವು ದೊರೆಯುತ್ತದೆ. ನಿಗದಿತ ಗಡುವಿನ ನಂತರ ಮರುಪಾವತಿಸಿದ ಸಾಲಗಳಿಗೆ ಸಾಲ ಪಡೆದ ದಿನಾಂಕದಿಂದ ಸಾಮಾನ್ಯ ಬಡ್ಡಿ ದರದಲ್ಲಿ ರೈತರು ಸಾಲ ಮರುಪಾವತಿಸಲು ಜವಾಬ್ದಾರರಾಗುತ್ತಾರೆ. ಬಡ್ಡಿ ರಿಯಾಯಿತಿಯನ್ನು ಗಡುವು ದಿನಾಂಕ ಅಥವಾ ಸಾಲ ಮರುಪಾವತಿಸಲಾದ ದಿನಾಂಕ ಇವುಗಳಲ್ಲಿ ಯಾವುದು ಮೊದಲೋ ಆ ದಿನಾಂಕದವರೆಗೆ ಪಾವತಿಸಲಾಗುವದು. ಈ ಯೋಜನೆಯು ಸಹಕಾರಿ ಸಂಸ್ಥೆಗಳು ನೀಡುವ ಕೃಷಿಯೇತರ (ಓoಟಿ-ಚಿgಡಿiಛಿuಟಣuಡಿಚಿಟ ಟoಚಿಟಿs) ಸಾಲಗಳಿಗೆ ಅನ್ವಯವಾಗುವುದಿಲ್ಲ.
ಅಲ್ಪಾವಧಿ ಬೆಳೆ ಸಾಲಗಳನ್ನು ನೀಡುತ್ತಿರುವ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಟಿಬೇಟಿಯನ್ ಸಹಕಾರ ಸಂಘಗಳು, ಲ್ಯಾಂಪ್ಸ್ಗಳಿಗೆ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕಿನ ಮೂಲಕ ಪಿಕಾರ್ಡ್ ಬ್ಯಾಂಕ್ಗಳು ಕಸ್ಕಾರ್ಡ್ ಬ್ಯಾಂಕಿನ ಮೂಲಕ ಬಡ್ಡಿ ಸಹಾಯಧನವನ್ನು ಬಿಡುಗಡೆ ಮಾಡಲಾಗುತ್ತದೆ. ಒಂದು ವೇಳೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಸಂಪನ್ಮೂಲಗಳನ್ನು ಕೃಷಿ ಅಲ್ಪಾವಧಿ ಸಾಲಗಳಲ್ಲಿ ತೊಡಗಿಸಿದಾಗ ಅಂತಹ ಸಾಲಗಳ ಪ್ರಮಾಣಕ್ಕನುಗುಣವಾಗಿ ರಾಜ್ಯ, ಕೇಂದ್ರ ಸರ್ಕಾರಗಳಿಂದ ದೊರೆಯುವ ಬಡ್ಡಿ ಸಹಾಯಧನವನ್ನು ಡಿಸಿಸಿ ಬ್ಯಾಂಕುಗಳು ಗೊತ್ತುಪಡಿಸಿದ ಶೇಕಡ ಪ್ರಮಾಣಕ್ಕನುಗುಣವಾಗಿ ಆಯಾ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳಿಗೆ ವರ್ಗಾಯಿಸತಕ್ಕದ್ದು.
ಪಿಕಾರ್ಡ್ ಬ್ಯಾಂಕುಗಳು ಇಂತಹ ಸಾಲಗಳನ್ನು ತನ್ನ ಸ್ವಂತ ಸಂಪನ್ಮೂಲದಿಂದ ಒದಗಿಸಿದಾಗ ಅಷ್ಟರಮಟ್ಟಿಗೆ ಕಸ್ಕಾರ್ಡ್ ಬ್ಯಾಂಕ್ ಸರ್ಕಾರದಿಂದ ಪಡೆಯುವ ಬಡ್ಡಿ ಸಹಾಯಧನವನ್ನು ಪಿಕಾರ್ಡ್ ಬ್ಯಾಂಕುಗಳಿಗೆ ಕಡ್ಡಾಯವಾಗಿ ಒದಗಿಸತಕ್ಕದ್ದು. ಒಂದು ಪಕ್ಷ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳ ಬದಲಾಗಿ ವಾಣಿಜ್ಯ ಬ್ಯಾಂಕುಗಳಿಂದ ಕೃಷಿ ಸಾಲ ಪಡೆದು ರೈತರಿಗೆ ವಿತರಣೆ ಮಾಡಿದಲ್ಲಿ ಸರ್ಕಾರದಿಂದ ಬಿಡುಗಡೆಯಾಗುವ ಬಡ್ಡಿ ಸಹಾಯಧನದ ಹೊಂದಾಣಿಕೆ ವಿಷಯದಲ್ಲಿ ಮೇಲೆ ಸೂಚಿಸಿದ ನಿಯಮಗಳನ್ನೇ ಪಾಲಿಸತಕ್ಕದ್ದು.