ಮಡಿಕೇರಿ, ಮೇ 21: ಕೊಡಗು ಜಿಲ್ಲೆಯಲ್ಲಿ ಪ್ರಾಧ್ಯಾಪಕರುಗಳಾಗಿ ಕಾರ್ಯನಿರ್ವಹಿಸುತ್ತಿರುವವರನ್ನು ಪಿಯುಸಿ ಪರೀಕ್ಷಾ ಮೌಲ್ಯಮಾಪನಕ್ಕಾಗಿ ಮೈಸೂರು ಮತ್ತು ಮಂಗಳೂರಿಗೆ ನೇಮಿಸುತ್ತಿರುವುದಾಗಿ ತಿಳಿದು ಬಂದಿದೆ. ಆದರೆ, ಈ ವರ್ಷ ಕೊರೊನಾ ವೈರಸ್‍ನಿಂದಾಗಿ ಜಿಲ್ಲೆಯ ಪ್ರಾಧ್ಯಾಪಕರುಗಳು ಬೇರೆಡೆಗೆ ತೆರಳಿ ಕಾರ್ಯನಿರ್ವಹಿಸಲು ಭಯಭೀತರಾಗಿದ್ದಾರೆ.
ಅಲ್ಲದೆ ಅಲ್ಲಿ ಮೌಲ್ಯಮಾಪನ ಕಾರ್ಯನಿರ್ವಹಿಸುವ ಸಂದರ್ಭ ವಸತಿ ಮತ್ತು ಊಟೋಪಚಾರ ವ್ಯವಸ್ಥೆಗೆ ಕಷ್ಟವಾಗುವುದರಿಂದ ಈ ಮೌಲ್ಯಮಾಪನ ಕೇಂದ್ರವನ್ನು ಮಡಿಕೇರಿಯಲ್ಲಿ ತೆರೆದು ಇಲ್ಲಿನ ಪ್ರಾಧ್ಯಾಪಕರುಗಳಿಗೆ ಅನುಕೂಲ ಕಲ್ಪಿಸುವಂತೆ ಎಂಎಲ್‍ಸಿ ಸುನಿಲ್ ಸುಬ್ರಮಣಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.