ವಾಹನ ಸಮೇತ ನಾಟಗಳ ವಶ

ಸಿದ್ದಾಪುರ, ಮೇ 21: ಅಕ್ರಮವಾಗಿ ತೇಗ ಮರದ ನಾಟಗಳನ್ನು ವಾಹನ ಸಮೇತ ಹಿಡಿಯುವಲ್ಲಿ ವೀರಾಜಪೇಟೆ ಅರಣ್ಯ ವಿಭಾಗದ ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಕಣ್ಣಂಗಲ್ ಸಮೀಪದ ಮುರುಳಿ ಎಂಬವರ ತೋಟದಲ್ಲಿ ಅಕ್ರಮವಾಗಿ ತೇಗ ಮರವನ್ನು ಕಡಿದು ನಾಟಗಳಾಗಿ ಪರಿವರ್ತಿಸಿ ಸಾಗಾಟ ಮಾಡಲು ಯತ್ನಿಸುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ವೀರಾಜಪೇಟೆ ಅರಣ್ಯ ವಿಭಾಗದ ಡಿ.ಸಿ.ಎಫ್. ರೋಶಿನಿ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ದಿಲೀಪ್ ಕುಮಾರ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆ್ಯಕ್ಸೆಂಟ್ ಕಾರನ್ನು, ಮಾರ್ಪಡಿಸಿದ ನಾಟಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಶಿವಕುಮಾರ್, ಅರಣ್ಯ ರಕ್ಷಕ ಅರುಣ್, ಆರ್.ಆರ್.ಟಿ. ತಂಡದ ಮುರುಗ, ಅಚ್ಚಯ್ಯ, ಮಂಜು, ರಾಚ, ವಿನೋದ್, ವಿನೋತ್, ಆದರ್ಶ್ ಭಾಗವಹಿಸಿದ್ದರು.