ಸಿದ್ದಾಪುರ, ಮೇ 21: ತನ್ನ ತಂದೆ ರಂಜಾನ್ ಹಬ್ಬಕ್ಕೆ ಬಟ್ಟೆ ತೆಗೆಯಲೆಂದು ಕಳುಹಿಸಿದ್ದ ಹಣವನ್ನು ಬಾಲಕನೋರ್ವ ಡಯಾಲಿಸಿಸ್ ಕೇಂದ್ರಕ್ಕೆ ನೀಡಿ ಮಾನವೀಯತೆ ಮೆರೆದ ಪ್ರಸಂಗ ಸಿದ್ದಾಪುರದಲ್ಲಿ ನಡೆದಿದೆ.

ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಶಿಹಾಬ್ ಮತ್ತು ಶಮೀನಾ ದಂಪತಿಯ ಪುತ್ರ ಶಹ ಬಾಸ್ ಅಮಲ್ ಎಂಬ ಬಾಲಕನ ತಂದೆ ವಿದೇಶದಲ್ಲಿ ಕೆಲಸದಲ್ಲಿದ್ದು, ರಂಜಾನ್ ಹಬ್ಬಕ್ಕೆಂದು ಬಟ್ಟೆ ತೆಗೆಯಲೆಂದು ಹಣ ಕಳುಹಿಸಿದ್ದರು. ಆದರೆ ಈ ಬಾಲಕ ಹಣವನ್ನು ಸಿದ್ದಾಪುರದ ಡಯಾಲಿಸಿಸ್ ಕೇಂದ್ರದ ಪ್ರಮುಖರಾದ ಬಶೀರ್ ಎಂಬವರ ಮುಖಾಂತರ ಡಯಾಲಿಸಿಸ್ ಕೇಂದ್ರಕ್ಕೆ ಹಸ್ತಾಂತರಿಸಿ ಮಾನವೀಯತೆ ಮೆರೆದಿದ್ದಾನೆ. ಈ ಪುಟ್ಟ ಬಾಲಕನ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.