ಶ್ರೀಮಂಗಲ, ಮೇ 20 : ಕೊರೊನಾ ಹಿನ್ನೆಲೆ ಮಾರ್ಚ್ 3ನೇ ವಾರದಿಂದ ಘೋಷಿಸಿದ ಲಾಕ್‍ಡೌನ್ ನಂತರ ನಿಲುಗಡೆಗೊಂಡ ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಮೇ ತಿಂಗಳ ಆರಂಭದಲ್ಲಿ ಮುಗಿದ 3ನೇ ಹಂತದ ಲಾಕ್‍ಡೌನ್ ನಂತರ ಒಟ್ಟಾರೆ ಸೀಟುಗಳಲ್ಲಿ ಶೇ.50 ರಷ್ಟು ಮೀರದಂತೆ ಪ್ರಯಾಣಿಕರನ್ನು ಭರ್ತಿ ಮಾಡಿಕೊಂಡು ಸಂಚರಿಸಲು ಅವಕಾಶ ಕಲ್ಪಿಸಲಾಗಿತ್ತು.

ಆದರೆ, ಈಗಾಗಲೇ ತೀವ್ರ ನಷ್ಟದಲ್ಲಿರುವ ಕೊಡಗಿನ ಖಾಸಗಿ ಬಸ್‍ಗಳನ್ನು ಈ ನಿಯಮದಲ್ಲಿ ಓಡಿಸಲು ಖಾಸಗಿ ಬಸ್ ಮಾಲೀಕರು ಒಪ್ಪಲಿಲ್ಲ. ಇದರಿಂದ ಯಾವುದೇ ಖಾಸಗಿ ಬಸ್ ರಸ್ತೆಗೆ ಇಳಿಯಲಿಲ್ಲ.

ಆದರೆ, ದಕ್ಷಿಣ ಕೊಡಗಿನ ಪೆÇನ್ನಂಪೇಟೆ-ಗೋಣಿಕೊಪ್ಪ ಮಾರ್ಗವಾಗಿ ಬುಧವಾರ ಖಾಸಗಿ ಬಸ್ ಒಂದು ಸಂಚಾರ ನಡೆಸುತ್ತಿದೆ.ಪೆÇನ್ನಂಪೇಟೆ-ಗೋಣಿಕೊಪ್ಪ ನಡುವಿನ 5 ಕಿ.ಮಿ.ಅಂತರದಲ್ಲಿ ಈ ಎರಡು ಪಟ್ಟಣದ ನಡುವೆ ಸಂಚಾರ ಆರಂಭಿಸಿದೆ.

ಬಸ್‍ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಶೇ. 50 ರಷ್ಟು ಸೀಟುಗಳನ್ನು ಮಾತ್ರ ಭರ್ತಿ ಮಾಡಿ ಸಂಚರಿಸುವ ನಿಯಮವಿದೆ. ಅದರಂತೆ ಪ್ರಯಾಣಿಕರನ್ನು ಕೂರಿಸಿಕೊಂಡು ಸಂಚಾರ ನಡೆಯುತ್ತಿದೆ.

ಪ್ರಯಾಣಿಕರು ಬಸ್‍ಗೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳಲಿಲ್ಲ. ಬಸ್‍ನಲ್ಲಿ ಬೆರಳೆಣಿಕೆಯಷ್ಟು ಪ್ರಯಾಣಿಕರು ಸಂಚರಿಸುತ್ತಿರುವುದು ಕಂಡು ಬಂತು.

ಕಳೆದ ವಾರವಷ್ಟೇ ಇದೇ ಮಾರ್ಗವಾಗಿ ಖಾಸಗಿ ಬಸ್ ಪ್ರಾಯೋಗಿಕವಾಗಿ ಸಂಚರಿಸಿತ್ತು. ಆದರೆ ಆ ಸಂದರ್ಭ ಬೆರಳೆಣಿಕೆ ಪ್ರಯಾಣಿಕರು ಸಂಚರಿಸಿದ ಕಾರಣ, ಬಸ್ ಮಾಲೀಕರಿಗೆ ನಷ್ಟವಾಗುವ ಹಿನ್ನೆಲೆ ಸಂಚಾರವನ್ನು ಮರು ದಿನದಿಂದಲೇ ಸ್ಥಗಿತಗೊಳಿಸಲಾಗಿತ್ತು.