ಶನಿವಾರಸಂತೆ, ಮೇ 19: ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಕಾಜೂರು ಗ್ರಾಮದ ನಿವಾಸಿ ರೀಷಿ (15) ಇಂದು ತನ್ನ ಮನೆಯ ಶೌಚಾಲಯದ ರೂಮಿನಲ್ಲಿ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.

ಕಾಜೂರು ಗ್ರಾಮದ ಗಾರೆ ಕೆಲಸದ ಜಿತೇಂದ್ರ ಅವರ ಮಗ ರೀಷಿ ಶನಿವಾರಸಂತೆಯ ಭಾರತಿ ವಿದ್ಯಾಸಂಸ್ಥೆ ಯೊಂದರ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿ. ತಂದೆ ಜಿತೇಂದ್ರ ನೀಡಿದ ದೂರಿನ ಮೇರೆ ಶನಿವಾರಸಂತೆ ಸಹಾಯಕ ಠಾಣಾಧಿಕಾರಿ ಎಂ.ಹೆಚ್. ಗೋವಿಂದ್ ಪ್ರಕರಣ ದಾಖಲಿಸಿದ್ದು, ಶನಿವಾರಸಂತೆ ಸಾರ್ವಜನಿಕ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ತನುಶ್ರೀ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿರುತ್ತಾರೆ.