ನಾಪೆÇೀಕ್ಲು, ಮೇ. 19: ಕೊಡವರ ವಿರುದ್ಧ ಅವಹೇಳನಕಾರಿಯಾಗಿ ಫೇಸ್‍ಬುಕ್‍ನಲ್ಲಿ ಪೆÇೀಸ್ಟ್ ಮಾಡಿದ ಗೌಸ್ ಶೇಖ್ ಎಂಬಾತನ ವಿರುದ್ಧ ನಾಪೆÇೀಕ್ಲು ಕೊಡವ ಸಮಾಜ ಮೇ 5ರಂದು ಮಡಿಕೇರಿ ಸೈಬರ್ ಕ್ರೈಂನಲ್ಲಿ ದೂರು ದಾಖಲಿಸಿದೆ. ಇದಾಗಿ ಸುಮಾರು 15 ದಿನಗಳಾಗುತ್ತಿದ್ದರೂ ತಪ್ಪಿತಸ್ಥರನ್ನು ಬಂಧಿಸಿಲ್ಲ. ಕೂಡಲೇ ಪೆÇಲೀಸ್ ಇಲಾಖೆ ತಪ್ಪಿತಸ್ಥರ ಬಂಧನಕ್ಕೆ ಸೂಕ್ತ ಕ್ರಮಕೈಗೊಳ್ಳ ಬೇಕೆಂದು ನಾಪೆÇೀಕ್ಲುವಿನ ಅಪ್ಪನೆರವಂಡ ಕಿರಣ್ ಕಾರ್ಯಪ್ಪ, ಬಾಳೆಯಡ ಪ್ರತೀಶ್, ಮಣವಟ್ಟೀರ ಮುತ್ತಣ್ಣ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ದೇಶದಲ್ಲಿ ಎಲ್ಲರಿಗೂ ಕಾನೂನು ಒಂದೇ. ಇದರಲ್ಲಿ ಯಾವದೇ ಜಾತಿ, ಧರ್ಮ, ಬೇಧಕ್ಕೆ ಅವಕಾಶವಿಲ್ಲ. ಆದರೂ ಕೆಲವೊಮ್ಮೆ ನಮ್ಮ ಆಡಳಿತ ವರ್ಗ, ಪೆÇಲೀಸ್ ಇಲಾಖೆ ಕೆಲವರ ಬಗ್ಗೆ ಮಾತ್ರ ಶೀಘ್ರ ಕಾನೂನಿನ ಕ್ರಮ ಕೈಗೊಳ್ಳುತ್ತದೆ.
ಇತರರ ಬಗ್ಗೆ ಉದಾಸೀನ ಭಾವ ತೋರುತ್ತಿದೆ ಎಂದು ಆರೋಪಿಸಿ ದರು. ಇಂತಹ ಪ್ರಕರಣಗಳ ಬಗ್ಗೆ ನಿರ್ಲಕ್ಷ್ಯ ತೋರಿದರೆ ಇದು ಮತ್ತೇ ಮರುಕಳಿಸುವ ಅಪಾಯವಿದೆ. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳು ತಪ್ಪಿತಸ್ಥರ ಬಂಧನಕ್ಕೆ ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಖಂಡನೆ : ಇತ್ತೀಚೆಗೆ ಕೊಡವ ಜನಾಂಗದ ಕೆಲವರು ನಮ್ಮ ಶಾಸಕರು ಮತ್ತು ಸಂಸದರನ್ನು ಫೇಸ್‍ಬುಕ್‍ನಲ್ಲಿ ನಿಂದಿಸಿರುವುದು ಸರಿಯಲ್ಲ. ಇದಕ್ಕೆ ನಮ್ಮ ಖಂಡನೆ ಇದೆ. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳು ತಪ್ಪಿತಸ್ಥರು ಯಾರೇ ಇರಲಿ ಅವರ ವಿರುದ್ಧ ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.