ಮಡಿಕೇರಿ, ಮೇ 19: ಜಿಲ್ಲಾಡಳಿತ ಹಾಗೂ ಕಾರ್ಮಿಕ ಇಲಾಖೆ ವತಿಯಿಂದ ಉತ್ತರ ಪ್ರದೇಶ ವಲಸೆ ಕಾರ್ಮಿರನ್ನು ಕಳುಹಿಸಿಕೊಡಲಾಯಿತು.

ಉತ್ತರಪ್ರದೇಶ: ಮಡಿಕೇರಿಯಿಂದ 2 ಕೆಎಸ್‍ಆರ್‍ಟಿಸಿ ಬಸ್, ಕುಶಾಲನಗರದಿಂದ 2, ಕೋಡ್ಲಿಪೇಟೆಯಿಂದ 1 ಮತ್ತು ವೀರಾಜಪೇಟೆಯಿಂದ 1 ಬಸ್ ಸೇರಿದಂತೆ ಒಟ್ಟು 6 ಬಸ್‍ಗಳಲ್ಲಿ ಉತ್ತರಪ್ರದೇಶದ ವಲಸೆ ಕಾರ್ಮಿಕರನ್ನು ಜಿಲ್ಲಾಧಿಕಾರಿ ಅವರ ಆದೇಶದಂತೆ ಸುಮಾರು 266 ಕಾರ್ಮಿಕರು ಮತ್ತು 4 ಮಕ್ಕಳು ಸೇರಿ ಒಟ್ಟು 270 ಜನರನ್ನು ತಾಲೂಕು ಆಡಳಿತದ ಮೂಲಕ ಕುಡಿಯುವ ನೀರು, ಬಿಸ್ಕತ್ತು ಮತ್ತು ಉಪಹಾರ ನೀಡಿ, ಕಾರ್ಮಿಕ ಇಲಾಖೆಯುಂದ ಮಾಸ್ಕ್ ಮತ್ತು ಸ್ಯಾನಿಟೈಜರ್ ನೀಡಿ ಮೈಸೂರಿನ ಅಶೋಕಪುರಂ ರೈಲ್ವೆ ನಿಲ್ದಾಣಕ್ಕೆ ಕಳುಹಿಸಿಕೊಡಲಾಯಿತು.

ಬಳಿಕ ರೈಲ್ವೆ ನಿಲ್ದಾಣದಲ್ಲಿ ದಾಖಲೆ ತೋರಿಸಿ ವೈದ್ಯಕೀಯ ಪರೀಕ್ಷೆ (ಸ್ಕ್ರೀನಿಂಗ್) ಮಾಡಿಸಿ ರೈಲ್ವೆ ನಿಲ್ದಾಣಕ್ಕೆ ತಲುಪಿಸಿ ವಿಶೇಷ ರೈಲಿನ ಮೂಲಕ ಉತ್ತರಪ್ರದೇಶಕ್ಕೆ ಕಳುಹಿಸಿಕೊಡಲಾಯಿತು ಎಂದು ಹಿರಿಯ ಕಾರ್ಮಿಕ ನಿರೀಕ್ಷಕ ಎಂ.ಎಂ ಯತ್ನಟ್ಟಿ ತಿಳಿಸಿದ್ದಾರೆ.

ಈ ಸಂದರ್ಭ ಉಪ ವಿಭಾಗಾಧಿಕಾರಿ ಟಿ. ಜವರೇಗೌಡ, ಸೋಮವಾರಪೇಟೆ ತಹಶೀಲ್ದಾರರಾದ ಗೋವಿಂದ ರಾಜು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಶಿರಾಜ್ ಅಹ್ಮದ್, ಗ್ರಾಮಲೆಕ್ಕಾಧಿಕಾರಿ ಸಣ್ಣ ರುದ್ರಪ್ಪ, ಪೆÇಲೀಸ್ ಅಧಿಕಾರಿ ಐ.ಪಿ. ಮೇದಪ್ಪ, ಮಡಿಕೇರಿ ನಗರಸಭೆ ಸಿಬ್ಬಂದಿ ಬಶೀರ್ ಇತರರು ಇದ್ದರು.

ಜಾರ್ಖಂಡ್: ಮಡಿಕೇರಿಯಿಂದ ಎರಡು ಕೆಎಸ್‍ಆರ್‍ಟಿಸಿ ಬಸ್, ಕುಶಾಲನಗರದಿಂದ ಒಂದು ಮತ್ತು ವೀರಾಜಪೇಟೆಯಿಂದ ಎರಡು ಬಸ್ ಸೇರಿದಂತೆ ಒಟ್ಟು 4 ಬಸ್‍ಗಳಲ್ಲಿ ಜಾಖರ್ಂಡ್‍ನ 188 ವಲಸೆ ಕಾರ್ಮಿಕರನ್ನು ಜಿಲ್ಲಾಧಿಕಾರಿ ಅವರ ಆದೇಶದಂತೆ 4 ಕೆ.ಎಸ್.ಆರ್.ಟಿ.ಸಿ. ಬಸ್‍ಗಳಲ್ಲಿ ಕಾರ್ಮಿಕ ಇಲಾಖೆಯಿಂದ ಮಾಸ್ಕ್ ಮತ್ತು ಸ್ಯಾನಿಟೈಜರ್ ನೀಡಿ ಸಂಪಾಜೆ ಚೆಕ್‍ಪೆÇೀಸ್ಟ್ ಮೂಲಕ ಡಿ.ಸಿ.ಆರ್.ಬಿ. ಪೆÇಲೀಸ್ ಇನ್ಸ್‍ಪೆಕ್ಟರ್ ಜಯರಾಮ ಅವರ ಜೊತೆಗೆ ವೈದ್ಯಕೀಯ ಪರೀಕ್ಷೆ (ಸ್ಕ್ರೀನಿಂಗ್) ಯನ್ನು ಸಂಪಾಜೆ ಚೆಕ್‍ಪೆÇೀಸ್ಟ್‍ನಲ್ಲಿ ಮಾಡಿಸಿ ಮಂಗಳೂರಿನ ರೈಲ್ವೆ ನಿಲ್ದಾಣಕ್ಕೆ ತಲುಪಿಸಿ, ವಿಶೇಷ ರೈಲಿನ ಮೂಲಕ ಜಾರ್ಖಂಡ್‍ಗೆ ತೆರಳುವ ಸಲುವಾಗಿ ಕಳಿಸಿಕೊಡಲಾಯಿತು ಎಂದು ಹಿರಿಯ ಕಾರ್ಮಿಕ ನಿರೀಕ್ಷಕ ಎಂ.ಎಂ. ಯತ್ನಟ್ಟಿ ತಿಳಿಸಿದ್ದಾರೆ.

ಈ ಸಂದರ್ಭ ಪ್ರಾಕೃತಿಕ ವಿಕೋಪ ಪರಿಹಾರ ಸಂಸ್ಥೆಯ ಮುಖ್ಯಸ್ಥರಾದ ಅನನ್ಯ ವಾಸುದೇವ, ನಗರಸಭೆಯ ಸಿಬ್ಬಂದಿ ಬಶೀರ್, ಸುಜಿತ್, ಸೂರ್ಯ, ಆರೋಗ್ಯ ಇಲಾಖೆ ಸಿಬ್ಬಂದಿ, ಗಣೇಶ ಕೆ.ಆರ್. ಇತರರು ಇದ್ದರು.