ಗೋಣಿಕೊಪ್ಪಲು, ಮೇ 20: ನ್ಯಾಯಾಲಯದಲ್ಲಿ ನಡೆಯುತ್ತಿರುವ ಜಾಗದ ವಿಚಾರದಲ್ಲಿ ಮತ್ತೊಬ್ಬರಿಗೆ ಬೆಂಬಲ ನೀಡುತ್ತಿದ್ದ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಮನೆಯ ಸಮೀಪದ ವ್ಯಕ್ತಿಯನ್ನು ಕೊಲೆ ಮಾಡಿದ ಘಟನೆ ಬಿಳುಗುಂದ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿ ಸತೀಶ್ (48) ಎಂದು ತಿಳಿದು ಬಂದಿದೆ. ತನ್ನ ತಾಯಿಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದನ್ನು ಪ್ರಶ್ನಿಸಿದನ್ನೇ ಮುಂದಿಟ್ಟುಕೊಂಡು ತನ್ನ ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕೊಲೆ ಆರೋಪಿ ವೀರಾಜಪೇಟೆ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದು, ಬಿಳುಗುಂದ ಗ್ರಾಮದ ಕುಮಾರ್‍ನನ್ನು ಪೆÇಲೀಸರು ವಶಕ್ಕೆ ಪಡೆದಿದ್ದಾರೆ. ಆತನಿಂದ ಕೃತ್ಯಕ್ಕೆ ಬಳಸಿದ ಬಂದೂಕನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.ಬಿಳುಗುಂದ ಗ್ರಾಮದ ಕಾಲ ಬೈರೇಶ್ವರ ಕಾಲೋನಿ ನಿವಾಸಿಗಳಾದ ಕೊಲೆ ಆರೋಪಿ ಕುಮಾರ್ ಹಾಗೂ ಮೃತ ವ್ಯಕ್ತಿ ಸುರೇಶ್ ಎಂಬಾತ ದೊಡ್ಡಪ್ಪ -ಚಿಕ್ಕಪ್ಪನ ಮಕ್ಕಳಾಗಿದ್ದು, ಅನತಿ ದೂರದ ಮನೆಯಲ್ಲಿ ವಾಸವಿದ್ದು, ಇಬ್ಬರ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು ಎನ್ನಲಾಗಿದೆ. ಬುಧವಾರ ಸಂಜೆ ವೇಳೆಯಲ್ಲಿ ಕುಮಾರ ಇದ್ದಕ್ಕಿದಂತೆಯೇ ಸತೀಶ್ ಮನೆಗೆ (ಮೊದಲ ಪುಟದಿಂದ) ಆಗಮಿಸಿ ಸತೀಶ್‍ನ ತಾಯಿಗೆ ಅವಾಚ್ಯ ಶಬ್ಧದಿಂದ ನಿಂದಿಸಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಮನೆಯಲ್ಲಿದ್ದ ಸತೀಶ್ ತಾಯಿಗೆ ಬೈದ ವಿಚಾರವನ್ನು ತನ್ನ ಮೊಬೈಲ್ ಫೆÇೀನ್‍ನಲ್ಲಿ ಸೆರೆಹಿಡಿದು ಇದನ್ನು ಪೆÇಲೀಸರಿಗೆ ನೀಡುವುದಾಗಿ ಬಹಿರಂಗವಾಗಿಯೇ ಹೇಳಿದ್ದಾನೆ. ಇದರಿಂದ ಕೋಪಗೊಂಡ ಕುಮಾರ್ ಸಮೀಪವಿದ್ದ ತನ್ನ ಮನೆಗೆ ತೆರಳಿ ಬಂದೂಕಿನೊಂದಿಗೆ ವಾಪಾಸು ಸತೀಶ್‍ನ ಮನೆಗೆ ಬಂದು ಮನೆಯ ಹೊರಗಡೆ ಇದ್ದ ಸತೀಶ್‍ನ ಮೇಲೆ ಬಂದೂಕಿನಿಂದ ಗುಂಡು ಸಿಡಿಸಿದ್ದಾನೆ. ರಕ್ತದ ಮಡುವಿನಲ್ಲಿ ಕುಸಿದು ಬಿದ್ದ ಸುರೇಶ್‍ನನ್ನು ವೀರಾಜಪೇಟೆ ಆಸ್ಪತ್ರೆಗೆ ಕರೆತರಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಸುದ್ದಿ ತಿಳಿದ ವೀರಾಜಪೇಟೆ ಡಿ.ವೈ.ಎಸ್.ಪಿ.ಜಯಕುಮಾರ್, ಸಿಪಿಐ, ಕ್ಯಾತೆಗೌಡ, ಎಸ್.ಐ.ವೀಣಾ ನಾಯಕ್ ಘಟನಾ ಸ್ಥಳಕ್ಕೆ ತೆರಳಿ ಆರೋಪಿ ಕುಮಾರ್‍ನನ್ನು ವಶಕ್ಕೆ ಪಡೆದಿದ್ದಾರೆ. ಪೆÇನ್ನಂಪೇಟೆ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. -ಹೆಚ್.ಕೆ.ಜಗದೀಶ್., ರಾಜ್‍ಕುಮಾರ್