ವೀರಾಜಪೇಟೆ, ಮೇ. 19: ಕೇರಳ ರಾಜ್ಯದಿಂದ ಅರಣ್ಯ ಮಾರ್ಗದಲ್ಲಿಯೇ ಅಕ್ರಮವಾಗಿ ಕಾಲ್ನಡಿಗೆಯಲ್ಲಿ ಕುಟ್ಟದ ನಾತಂಗಲ್ ಕಾಲೋನಿಗೆ ಬಂದಿದ್ದ ವ್ಯಕ್ತಿಯನ್ನು ಜಿಲ್ಲಾ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೊಳಪಡಿಸಲಾಗಿದೆ ಎಂದು ತಹಶೀಲ್ದಾರ್ ನಂದೀಶ್ ತಿಳಿಸಿದ್ದಾರೆ.ಕೇರಳದ ಮೂಲ ನಿವಾಸಿಯಾಗಿ ಕೊಡಗಿನಲ್ಲಿ ನೆಲೆಸಿದ್ದು ಕಾರ್ಮಿಕನಾಗಿ ದುಡಿಯಲು ಕೇರಳಕ್ಕೆ ತೆರಳಿದ್ದಾಗ ಈತ ಲಾಕ್‍ಡೌನ್ ನಿರ್ಬಂಧದಲ್ಲಿ ಸಿಕ್ಕಿಹಾಕಿಕೊಂಡಿದ್ದ ಕುಟ್ಟದ ನಾತಂಗಲ್ ಕಾಲೋನಿಯಲ್ಲಿ ಈತನ ಮನೆ ಇದ್ದುದರಿಂದ ಇಂದು ಬೆಳಗಿನ ಜಾವ ಕಾಲ್ನಡಿಗೆಯಲ್ಲಿಯೇ ಮನೆ ಸೇರಿದನ್ನು ಕಂದಾಯ ಅಧಿಕಾರಿಗಳು ಪತ್ತೆ ಹಚ್ಚಿ ತಾಲೂಕು ಕೇರಳದಿಂದ ಅಕ್ರಮವಾಗಿ ಬಂದಾತ ಆರೋಗ್ಯ ತಪಾಸಣೆಗೆ (ಮೊದಲ ಪುಟದಿಂದ) ಆರೋಗ್ಯ ತಂಡಕ್ಕೆ ದೂರು ನೀಡಿದರೆಂದು ತಾಲೂಕು ತಹಶೀಲ್ದಾರ್ ನಂದೀಶ್ ತಿಳಿಸಿದ್ದಾರೆ. ಕೇರಳದಿಂದ ಕೊಡಗಿಗೆ ವಲಸೆ ಬರುವ ಅಕ್ರಮ ವಲಸೆಗಾರರನ್ನು ಮಾಕುಟ್ಟ ಚೆಕ್‍ಪೋಸ್ಟ್‍ನಲ್ಲಿ ತಡೆ ಹಿಡಿಯಲು ಕಂದಾಯ ಇಲಾಖೆಯಿಂದ ಖಾಯಂ ಆಗಿ ರೆವಿನ್ಯೂ ಸಿಬ್ಬಂದಿಯನ್ನು ನೇಮಕ ಮಾಡಿದ್ದು ಈ ಸಿಬ್ಬಂದಿ ಚೆಕ್‍ಪೋಸ್ಟ್‍ನ ದೈನಂದಿನ ಕಾರ್ಯ ಚಟುವಟಿಕೆಗಳ ವರದಿಯನ್ನು ವ್ಯಾಟ್ಸಪ್ ಮೂಲಕ ತಾಲೂಕು ಕಚೇರಿಗೆ ವರದಿ ಮಾಡುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.