ಮಡಿಕೇರಿ, ಮೇ 20: ಕೊರೊನಾ ಲಾಕ್‍ಡೌನ್ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಈತನಕ ಹಲವಷ್ಟು ವಾಹನಗಳನ್ನು ತೆರಿಗೆ ವಿನಾಯ್ತಿಗಾಗಿ ಕೋರಿ ಪ್ರಾದೇಶಿಕ ಸಾರಿಗೆ ಇಲಾಖೆಗೆ ಶರಣಾಗತಿ ಮಾಡಲಾಗಿದೆ.

ಏಪ್ರಿಲ್ ಅಂತ್ಯದವರೆಗೆ ಒಟ್ಟು 173 ವಾಹನಗಳು ಈ ರೀತಿಯಲ್ಲಿ ಇಲಾಖೆಗೆ ಶರಣಾಗತಿಯಾಗಿವೆ. ಇದರಲ್ಲಿ 142 ಖಾಸಗಿ ಬಸ್‍ಗಳು, 27 ಕಾಂಟ್ರ್ಯಾಕ್ಟ್ ಕ್ಯಾರೇಜ್‍ಗಳು ಹಾಗೂ 4 ಗೂಡ್ಸ್ ವಾಹನಗಳು ಸೇರಿವೆ. ಮೇ ತಿಂಗಳಿನಲ್ಲಿಯೂ ಸುಮಾರು 10 ರಷ್ಟು ವಾಹನಗಳು ಸೇರ್ಪಡೆಗೊಂಡಿವೆ.

ಜಿಲ್ಲೆಯಲ್ಲಿ ಒಟ್ಟು 148 ಖಾಸಗಿ ಬಸ್‍ಗಳಿದ್ದು, ಇವುಗಳಲ್ಲಿ 142 ಬಸ್‍ಗಳು ಶರಣಾಗತಿಯಲ್ಲಿವೆ. ಏಪ್ರಿಲ್ ತಿಂಗಳ ತೆರಿಗೆಯಲ್ಲಿ ವಿನಾಯಿತಿ ಸಿಗಲಿದೆ ಎನ್ನಲಾಗಿದ್ದರೂ ಅಧಿಕೃತ ಆದೇಶ ಇಲಾಖೆಯ ಕೈ ಸೇರಿಲ್ಲ.