ಮಡಿಕೇರಿ, ಮೇ 19: ಇದುವರೆಗೆ ಮಂಗಳೂರು ವೃತ್ತದೊಳಗೆ ಕಾರ್ಯನಿರ್ವಹಣೆಯಲ್ಲಿದ್ದ ಕೊಡಗು ಲೋಕೋಪಯೋಗಿ ಇಲಾಖೆಯನ್ನು ಹಾಸನ ವೃತ್ತಕ್ಕೆ ಮಾರ್ಪಾಡುಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಇದುವರೆಗೆ ಮಂಗಳೂರು ವೃತ್ತದ ಅಧೀಕ್ಷಕ ಅಭಿಯಂತರರ ಅನುಮೋದನೆಯಡಿ ಕೆಲಸ ನಿರ್ವಹಿಸುತ್ತಿದ್ದ ಇಲ್ಲಿನ ಲೋಕೋಪಯೋಗಿ ಅಧಿಕಾರಿಗಳು, ಭವಿಷ್ಯದ ಎಲ್ಲಾ ಕಾಮಗಾರಿಗಳ ಅನುಷ್ಠಾನದೊಂದಿಗೆ ಹಣ ಪಾವತಿಗೆ ಹಾಸನ ವೃತ್ತ ಅಧೀಕ್ಷಕ ಅಭಿಯಂತರರ ಅನುಮೋದನೆ ಪಡೆದುಕೊಳ್ಳಬೇಕಿದೆ. ಹಾಸನ ವೃತ್ತಕ್ಕೆ ಕೊಡಗು ಶಾಖೆ ಮಾರ್ಪಾಡು ಗೊಂಡಿರುವ ಹಿನ್ನೆಲೆಯಲ್ಲಿ ದೈನಂದಿನ ಕೆಲಸ ಕಾರ್ಯಗಳಿಗೆ ಅನುಕೂಲವಾಗಲಿದೆ ಎಂದು ಇಲ್ಲಿನ ಕಚೇರಿ ಮೂಲಗಳು ಅಭಿಪ್ರಾಯಪಟ್ಟಿವೆ.