ಸೋಮವಾರಪೇಟೆ,ಮೇ 19: ಪಟ್ಟಣದ 1ನೇ ಕುಸುಬೂರು ಕಾಫಿ ತೋಟದ ಮಾಲೀಕರಾದ ಡಿ.ಪ್ರೀತಂ ಬಸಪ್ಪ ಅವರು, ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಎನ್-95 ಮಾಸ್ಕ್ ಹಾಗೂ ಸ್ಯಾನಿಟೈಸರ್ ಒದಗಿಸಿದ್ದು, ತೋಟದ ವ್ಯವಸ್ಥಾಪಕ ಎಂ.ಸಿ.ಕಿರಣ್ ಅವರು ಸಿಬ್ಬಂದಿಗಳಿಗೆ ವಿತರಿಸಿದರು. ಈ ಸಂದರ್ಭ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶಿವಪ್ರಸಾದ್, ಡಾ.ಸತೀಶ್ ಕುಮಾರ್, ಶುಶ್ರೂಷಕಿ ಕಮಲ ಅವರುಗಳು ಉಪಸ್ಥಿತರಿದ್ದರು.