ಕೂಡಿಗೆ, ಮೇ 20: ತಾ. 18 ರಂದು ಪ್ರಕಟಗೊಂಡ ‘ಭುವನಗಿರಿ ಕಸ ವಿಲೇವಾರಿ ಘಟಕದಲ್ಲಿ ಅಸಮರ್ಪಕ ನಿರ್ವಹಣೆ, ರೋಗಗಳು ಹರಡುವ ಬೀತಿ’ ಎಂಬ ವರದಿಗೆ ಕುಶಾಲನಗರ ಪಟ್ಟಣ ಪಂಚಾಯಿತಿ ಅಧಿಕಾರಿ ವರ್ಗದವರು ಸ್ಪಂದಿಸಿದ್ದಾರೆ.
ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ, ಕುಶಾಲನಗರ ಕಸ ವಿಲೇವಾರಿ ಘಟಕದ ಕಸದ ರಾಶಿಯನ್ನು ಇಂದು ಜೆಸಿಬಿ ಯಂತ್ರಗಳ ಮೂಲಕ ಗುಂಡಿಗಳಿಗೆ ಸುರಿದು ನಂತರ ಅವುಗಳ ಮೇಲೆ ಮಣ್ಣನ್ನು ಹಾಕಲಾಯಿತು. ಅಲ್ಲದೆ ಮುನ್ನೆಚರಿಕೆ ಕ್ರಮವಾಗಿ ಪಟ್ಟಣ ಪಂಚಾಯತಿ ಆರೋಗ್ಯ ಅಧಿಕಾರಿ ನಿರ್ದೇಶನದಲ್ಲಿ ರೋಗ ನಿರೋಧಕ ಔಷಧಿಗಳ ಸಿಂಪಡಿಸಲಾಯಿತು. ಈ ಸಂದರ್ಭ ಕುಶಾಲನಗರ ಪಟ್ಟಣ ಪಂಚಾಯತಿ ಆರೋಗ್ಯ ಅಧಿಕಾರಿ ಸೇರಿದಂತೆ ಸಿಬ್ಬಂದಿಗಳು ಇದ್ದರು.