ಶ್ರೀಮಂಗಲ/ಗೋಣಿಕೊಪ್ಪಲು, ಮೇ 20: ದಕ್ಷಿಣ ಕೊಡಗಿನ ಹಲವಾರು ಗ್ರಾಮಗಳಲ್ಲಿ ಜಾನು ವಾರುಗಳನ್ನು ಕಬಳಿಸುತ್ತಾ ತನ್ನ ಅಟ್ಟಹಾಸವನ್ನು ಮೆರೆಯುವುದರೊಂದಿಗೆ ಆ ವಿಭಾಗದ ರೈತರುಗಳಲ್ಲಿ ತೀವ್ರ ಆತಂಕ ಮೂಡಿಸುತ್ತಿದ್ದ ‘ವ್ಯಾಘ್ರ’ವನ್ನು ಅರಣ್ಯ ಇಲಾಖೆ ಕೊನೆಗೂ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.ನಿನ್ನೆ ಸಂಜೆಯಿಂದ ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳೂರು ಗ್ರಾಮದ ಕಳ್ಳೇಂಗಡ ದಿನೇಶ್ ದೇವಯ್ಯ ಅವರ ಕಾಫಿ ತೋಟದಲ್ಲಿ ಭಾರೀ ಕಸರತ್ತಿನ ಕಾರ್ಯಾಚರಣೆ ಯೊಂದಿಗೆ ಈ ಹುಲಿರಾಯ ಸೆರೆಯಾಗಿದೆ. ಇದೀಗ ಈ ಹುಲಿಯನ್ನು ಮೈಸೂರಿನ ಕೂರ್ಗಳ್ಳಿಯಲ್ಲಿರುವ ಹುಲಿ ಪುನಶ್ಚೇತನ ಕೇಂದ್ರಕ್ಕೆ ಸಾಗಿಸಲಾಗಿದೆ.ಸೆರೆಯಾದ ಈ ವನ್ಯಮೃಗ 8 ರಿಂದ 9 ವರ್ಷದ್ದು ಎಂದು ಅಂದಾಜಿಸಲಾಗಿದೆ. ಹುಲಿ ಸೆರೆಯಾದ ಬಗ್ಗೆ ಹಾಗೂ ಕಾರ್ಯಾಚರಣೆ ಕುರಿತಾಗಿ ಅರಣ್ಯ ಇಲಾಖೆ ಬಗ್ಗೆ ಸಾರ್ವಜನಿಕರು, ಸಂಘ-ಸಂಸ್ಥೆಗಳು, ರೈತರು, ಜನಪ್ರತಿನಿಧಿಗಳಿಂದ ಶ್ಲಾಘನೆ ವ್ಯಕ್ತಗೊಂಡಿದೆ. ಶ್ರೀಮಂಗಲ, ಬಾಳೆಲೆ, ಕುಟ್ಟ, ಕುರ್ಚಿ, ಹುದಿಕೇರಿ ಮತ್ತಿತರ ಕಡೆಗಳಲ್ಲಿ ನಿರಂತರವಾಗಿ ಜಾನುವಾರುಗಳು ಬಲಿಯಾಗುತ್ತಿದ್ದು, 2019 ರಿಂದ ಈ ತನಕ 24 ಮೂಕಪ್ರಾಣಿಗಳನ್ನು ಹುಲಿ ಕೊಂದು ಹಾಕಿತ್ತು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ-ಪ್ರತಿಭಟನೆಗಳೂ ನಡೆಯುತ್ತಿದ್ದುದನ್ನು ಇಲ್ಲಿ ಸ್ಮರಿಸಬಹುದಾಗಿದೆ.ನಿನ್ನೆ ಸಂಜೆ ವೇಳೆಯಿಂದ ಕಾರ್ಯಾಚರಣೆ ಆರಂಭಗೊಂಡಿದ್ದು, ಶಾರ್ಫ್ ಶೂಟರ್‍ಗಳಾದ ಸನತ್ ಕೃಷ್ಣ ಮುಳಿಯ, ಅರೆವಳಿಕೆ ತಜ್ಞರುಗಳಾದ ಕನ್ನಂಡ ರಂಜನ್, ಡಾ. ಮಜೀದ್ ಅವರುಗಳನ್ನು ಒಳಗೊಂಡಂತೆ ಇಲಾಖೆಯ ಹಿರಿಯ ಅಧಿಕಾರಿಗಳು ನಡೆಸಿರುವ ಕಾರ್ಯಾಚರಣೆ ಯಶಸ್ಸು ಕಂಡಿದೆ.

ರೈತ ಸಂಘದ ಕಾಡ್ಯಮಾಡ ಮನು ಸೋಮಯ್ಯ ನೇತೃತ್ವದ ರೈತ ಸಂಘ ಸೇರಿದಂತೆ ಆಯಾ ವಿಭಾಗದ ರೈತ ಪ್ರಮುಖರುಗಳು ಅರಣ್ಯ ಇಲಾಖೆಯ ಮೇಲೆ ಹುಲಿ ಸೆರೆಯ ಬಗ್ಗೆ ಭಾರೀ ಒತ್ತಡ ತಂದಿದ್ದರು. ಶಾಸಕ ಕೆ.ಜಿ. ಬೋಪಯ್ಯ ಅವರು ಕೂಡ ಈ ಬಗ್ಗೆ ಸೂಚನೆ ನೀಡಿದ್ದರು.ಕಾರ್ಯಾಚರಣೆ ಹೀಗಿತ್ತು ಕಾರ್ಯಾಚರಣೆ ನಡೆಸಲು ಮಂಗಳವಾರ ಸಂಜೆಯಿಂದಲೇ ಅರಣ್ಯ ಇಲಾಖೆ ಸಿದ್ಧತೆ ನಡೆಸಿತ್ತು. ಬೆಳ್ಳೂರು ಗ್ರಾಮದ

(ಮೊದಲ ಪುಟದಿಂದ) ದಿನೇಶ್ ದೇವಯ್ಯ ಅವರ ಹಸುವನ್ನು ತಾ. 17 ರಂದು ಹಾಡಹಗಲೇ ಹುಲಿ ದಾಳಿ ನಡೆಸಿ ಕೊಂದು ಹಾಕಿತ್ತು. ಇದೇ ಸ್ಥಳವನ್ನು ಹುಲಿ ಸೆರೆಗೆ ಆಯ್ಕೆ ಮಾಡಿಕೊಂಡ ಅರಣ್ಯ ಇಲಾಖೆ ಹುಲಿಯನ್ನು ಅರೆವಳಿಕೆ ಮೂಲಕ ಸೆರೆ ಹಿಡಿಯಲು ಎಲ್ಲಾ ಸಿದ್ಧತೆಯನ್ನು ಮಾಡಿಕೊಂಡಿತ್ತು.

ಹುಲಿ ಸೆರೆಗೆ ಬೆಳ್ಳೂರು ಗ್ರಾಮದಲ್ಲಿ ಹಸು ಹಿಡಿದ ಸ್ಥಳದಿಂದ 20 ಅಡಿ ದೂರದಲ್ಲಿ 8 ಅಡಿ ಎತ್ತರದ ಅಟ್ಟಣಿಗೆ ನಿರ್ಮಿಸಿ ರಾತ್ರಿ ಪೂರ್ತಿ ಹುಲಿ ಬರುವುದನ್ನು ಕಾದು ಅರವಳಿಕೆ ನೀಡಲು ಅರಣ್ಯ ಇಲಾಖೆಯ ಅಧಿಕಾರಿಗಳು ಯೋಜನೆ ರೂಪಿಸಿದರು.

ಇದರಂತೆ 8 ಅಡಿಯ ಅಟ್ಟಣಿಗೆ ನಿರ್ಮಿಸಿ ಅದರಲ್ಲಿ ಡಾ. ಸನತ್ ಮತ್ತು ಡಿ.ಆರ್.ಎಫ್.ಓ ಕನ್ನಂಡ ರಂಜನ್ ದೇವಯ್ಯ ಕಾದು ಕೂತಿದ್ದರು. ಡಿ.ಎಫ್.ಓ, ಎ.ಸಿ.ಎಫ್ ಆರ್.ಎಫ್.ಓ, ಸಿಬ್ಬಂದಿಗಳು, ಮೂರು ಸಾಕಾನೆಗಳಾದ ಅಭಿಮನ್ಯು, ಗಣೇಶ, ಭೀಮ ಸೇರಿದಂತೆ ಇತರರು ಜೀಪಿನಲ್ಲಿ ಕೂತು ಪರಿಸ್ಥಿತಿಯ ಬಗ್ಗೆ ನಿಗಾವಹಿಸಿದ್ದರು.

ಹುಲಿ ಅಟ್ಟಣಿಗೆಯ ಸಮೀಪ ಹಸುವಿನ ಕಳೆಬರಹವನ್ನು ತಿನ್ನಲು ಆಗಮಿಸಿದ ಸಂದರ್ಭ ಅರೆವಳಿಕೆಯ ಮದ್ದು ಸಹಿತ ಹುಲಿಯನ್ನು ಕೆಡವಲಾಯಿತು. ಅರಣ್ಯ ಇಲಾಖೆಗೆ ಮಾತ್ರ ಕೊಡುವಂತಹ ರಾತ್ರಿ ವೀಕ್ಷಣೆಯ ಅತ್ಯಾಧುನಿಕ ಬೈನಾಕ್ಯೂಲರ್ ನೀಡಿದ್ದು, ಹೆಚ್ಚು ಪ್ರಯೋಜನವಾಯಿತು. ಈ ಬೈನಾಕ್ಯೂಲರ್ ಮೂಲಕ ಹುಲಿ ಆಗಮಿಸುವುದನ್ನು ಮುಂಚಿತವಾಗಿಯೇ ಕಂಡು ಹಿಡಿದು ಹುಲಿಗೆ ಯಶಸ್ವಿಯಾಗಿ ಅರೆವಳಿಕೆ ಮದ್ದು ನೀಡಲು ಸಾಧ್ಯವಾಯಿತು. ನಂತರ ಹುಲಿಯು ಗುಂಡು ಹೊಡೆದ ಸ್ಥಳದಿಂದ 15 ಮೀ. ದೂರದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದನ್ನು ಬಲೆಯ ಮೂಲಕ ಹಿಡಿದು ಕ್ಷಿಪ್ರ ಕಾರ್ಯಪಡೆಯ ವಾಹನದ ಮೂಲಕ ಮೈಸೂರಿನ ಕೂರ್ಗಳ್ಳಿಯಲ್ಲಿರುವ ಹುಲಿ ಪುನಶ್ಚೇತನ ಕೇಂದ್ರಕ್ಕೆ ಬಿಡಲಾಯಿತು. ಹುಲಿಗೆ ಮತ್ತೆ ಪ್ರಜ್ಞೆ ಬರುವ ಚುಚ್ಚು ಮದ್ದು ನೀಡಲಾಗಿದ್ದು, ಮತ್ತೆ ಅದು ಸಹಜ ಸ್ಥಿತಿಗೆ ಬಂದು ಆರೋಗ್ಯವಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕರು, ಸಂಘ-ಸಂಸ್ಥೆಗಳ ಪ್ರತಿಭಟನೆಯ ಹಿನ್ನೆಲೆ ತಾ. 20.02.2020ರಲ್ಲಿ ಪಿ.ಸಿ.ಸಿ.ಎಫ್ ಅವರಿಂದ ಹುಲಿ ಸೆರೆಗೆ ಅಧಿಕೃತ ಅನುಮತಿ ಪತ್ರ ನೀಡಲಾಗಿತ್ತು. ಆರಂಭದಲ್ಲಿ ಮಾರ್ಚ್ 5 ರಿಂದ 16ರ ತನಕ ನಡೆದ ಕಾರ್ಯಾಚರಣೆ ವಿಫಲಗೊಂಡಿತ್ತು. ಈ ನಡುವೆ ಹುಲಿಯ ಚಿತ್ರ ಇಲಾಖೆ ಹುಲಿ ಪುನಶ್ಚೇತನ ಕೇಂದ್ರಕ್ಕೆ ಬಿಡಲಾಯಿತು. ಹುಲಿಗೆ ಮತ್ತೆ ಪ್ರಜ್ಞೆ ಬರುವ ಚುಚ್ಚು ಮದ್ದು ನೀಡಲಾಗಿದ್ದು, ಮತ್ತೆ ಅದು ಸಹಜ ಸ್ಥಿತಿಗೆ ಬಂದು ಆರೋಗ್ಯವಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕರು, ಸಂಘ-ಸಂಸ್ಥೆಗಳ ಪ್ರತಿಭಟನೆಯ ಹಿನ್ನೆಲೆ ತಾ. 20.02.2020ರಲ್ಲಿ ಪಿ.ಸಿ.ಸಿ.ಎಫ್ ಅವರಿಂದ ಹುಲಿ ಸೆರೆಗೆ ಅಧಿಕೃತ ಅನುಮತಿ ಪತ್ರ ನೀಡಲಾಗಿತ್ತು. ಆರಂಭದಲ್ಲಿ ಮಾರ್ಚ್ 5 ರಿಂದ 16ರ ತನಕ ನಡೆದ ಕಾರ್ಯಾಚರಣೆ ವಿಫಲಗೊಂಡಿತ್ತು. ಈ ನಡುವೆ ಹುಲಿಯ ಚಿತ್ರ ಇಲಾಖೆ