ಕುಶಾಲನಗರ, ಮೇ 20: ನಂಜರಾಯಪಟ್ಟಣದ ಕಾಫಿ ತೋಟವೊಂದರಲ್ಲಿ ಚಿರತೆಯ ಕಳೇಬರ ಪತ್ತೆಯಾಗಿದೆ. ನಂಜರಾಯಪಟ್ಟಣದ ಮುತ್ತಣ್ಣ ಕಾರ್ಯಪ್ಪ ಎಂಬವರ ತೋಟದಲ್ಲಿ ಬುಧವಾರ ಚಿರತೆ ಮೃತದೇಹ ಕಂಡುಬಂದಿದ್ದು ಅಂದಾಜು 6 ವರ್ಷ ಪ್ರಾಯದ ಗಂಡು ಚಿರತೆ ಮೃತಪಟ್ಟು ಎರಡು ದಿನಗಳಾಗಿರುವ ಶಂಕೆ ವ್ಯಕ್ತಗೊಂಡಿದೆ.ಸ್ಥಳಕ್ಕೆ ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್, ಸೋಮವಾರಪೇಟೆ ಎಸಿಎಫ್ ಕೊಚ್ಚೇರ ನೆಹರು (ಮೊದಲ ಪುಟದಿಂದ) ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚೆಟ್ಟಳ್ಳಿಯ ಪಶು ವೈದ್ಯಾಧಿಕಾರಿ ಸಂಜೀವ ರೆಡ್ಡಿ ಕಳೆಬರದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ತೋಟದಲ್ಲಿಯೇ ಚಿರತೆಯ ಅಂತ್ಯಸಂಸ್ಕಾರ ನೆರವೇರಿ ಸಲಾಯಿತು. ಯಾರೋ ವ್ಯಕ್ತಿಗಳು ಉರುಳು ಹಾಕಿದ್ದರಿಂದ ಚಿರತೆ ಮೃತಪಟ್ಟಿದ್ದು, ಈ ಬಗ್ಗೆ ಮೊಕದ್ದಮೆ ಮಾಡಿಕೊಳ್ಳಲಾಗಿದೆ ಎಂದು ಆರ್‍ಎಫ್‍ಓ ತಿಳಿಸಿದ್ದಾರೆ.