ಕೂಡಿಗೆ, ಮೇ 18: ಕೊಡಗು ಸೈನಿಕ ಶಾಲೆಯು ಕೂಡಿಗೆಯಲ್ಲಿ ಪ್ರಾರಂಭವಾಗಿ 10 ವರ್ಷಗಳು ಕಳೆಯುತ್ತಾ ಬಂದಿದೆ. ಸೈನಿಕ ಶಾಲೆಯಲ್ಲಿ ಕಳೆದ 10 ವರ್ಷಗಳಿಂದ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಳು ನಡೆಯುತ್ತಲೆ ಇವೆ. ಆದರೆ ಜಿಲ್ಲೆಯ ಯುವಕರು ಅರ್ಜಿ ಸಲ್ಲಿಸಿದರು ಸಹ ಬೇರೆ ಬೇರೆ ನಪ ಹೇಳಿ ಅಂತರರಾಜ್ಯ ಮತ್ತು ಅಂತರ ಜಿಲ್ಲೆಯವರನ್ನು ಗುತ್ತಿಗೆ ಅಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಈ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯ ಅರ್ಹ ಯುವಕರಿಗೆ ಉದ್ಯೋಗ ಕಲ್ಪಿಸಬೇಕೆಂದು ಈ ವ್ಯಾಪ್ತಿಯ ಸಾರ್ವಜನಿಕರ ಆಗ್ರಹವಾಗಿದೆ.