ವೀರಾಜಪೇಟೆ, ಮೇ 18: ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಹಾಗೂ ಸಮಾಜ ಸೇವಕರು ಆಗಿದ್ದ ಮುತ್ತಪ್ಪ ರೈ ಅವರ ನಿಧನಕ್ಕೆ ವೀರಾಜಪೇಟೆ ಸಂಘಟನೆಯ ತಾಲೂಕು ಸಮಿತಿ ಸಂತಾಪ ಸಭೆ ನಡೆಸಿತು. ಅಧ್ಯಕ್ಷ ಮಂಡೇಟಿರ ಅನಿಲ್ ಅಯ್ಯಪ್ಪ, ಉಪಾಧ್ಯಕ್ಷ ವಿನೋದ್, ಕಾರ್ಯದರ್ಶಿ ಸುರೇಶ್, ನಗರ ಸಮಿತಿ ಅಧ್ಯಕ್ಷ ಎಸ್.ಎಚ್.ಮಂಜುನಾಥ್, ಎಂ.ಎಂ. ಪೊನ್ನಪ್ಪ, ರಜನಿ ಬಿಂದು ಸಂತಾಪ ವ್ಯಕ್ತಪಡಿಸಿದರು.