ನಾಪೋಕ್ಲು, ಮೇ 18: ಭಾನುವಾರ ನೀರು ಪಾಲಾದ ಯುವಕನ ಮೃತದೇಹದ ಹುಡುಕಾಟ ಕಾರ್ಯವನ್ನು ಮುಳುಗುತಜ್ಞರು ನಡೆಸಿದ್ದು ತಡರಾತ್ರಿ ಶವ ಪತ್ತೆಯಾಗಿದೆ. ಮಡಿಕೇರಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸೋಮವಾರ ಸಂಜೆ ಪಾಲೂರು ಗ್ರಾಮದ ಮನೆಯಲ್ಲಿ ಅಂತ್ಯಕ್ರಿಯೆ ಜರುಗಿತು.

ಭಾನುವಾರ ಸಂಜೆ ಯುವಕರು ನಾಪೋಕ್ಲು ಸಮೀಪದ ಚೆರಿಯಪರಂಬುವಿನ ಕಾವೇರಿ ಹೊಳೆಯಲ್ಲಿ ಈಜಲು ತೆರಳಿದ್ದರು. ಇಬ್ಬರು ಯುವಕರು ನೀರಿನಲ್ಲಿ ಮುಳುಗಿದ್ದು, ಓರ್ವ ಯುವಕ ಸಾವನ್ನಪ್ಪಿದ್ದಾನೆ. ಪಾಲೂರು ಗ್ರಾಮದ ಮೇಪಾಡಂಡ ರಮೇಶ್‍ಮೊಣ್ಣಪ್ಪ ಮತ್ತು ಪುಷ್ಪಾ ದಂಪತಿಗಳ ಪುತ್ರ ನಿತಿನ್ (27) ಸಾವನ್ನಪ್ಪಿದ ದುರ್ದೈವಿ. ನಾಪೋಕ್ಲು ಠಾಣಾಧಿಕಾರಿ ಆರ್.ಕಿರಣ್ ಪ್ರಕರಣ ದಾಖಲಿಸಿಕೊಂಡಿದ್ದು ಕಾನೂನು ಕ್ರಮ ಕೈಗೊಂಡಿದ್ದಾರೆ.