ಕುಶಾಲನಗರ, ಮೇ 18: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಕಾವೇರಿ ನದಿ ನಿರ್ವಹಣಾ ಕಾಮಗಾರಿ ಮಂಗಳವಾರದಿಂದಲೇ ಪ್ರಾರಂಭಿಸು ವುದಾಗಿ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಭರವಸೆ ವ್ಯಕ್ತಪಡಿಸಿದ್ದಾರೆ.ಕುಶಾಲನಗರ ಕಾವೇರಿ ನದಿ ಸಂತ್ರಸ್ತರ ವೇದಿಕೆಯ ನೂರಾರು ಸದಸ್ಯರು ನದಿ ತಟದಲ್ಲಿ ಶಾಸಕರು ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ನಂತರ ಮಾತನಾಡಿದ ಶಾಸಕ ಅಪ್ಪಚ್ಚುರಂಜನ್, ಈಗಾಗಲೆ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ದೊರೆತು ಸಂತ್ರಸ್ತರ ಒತ್ತಾಯದ ಮೇರೆಗೆ ಪ್ರಾರಂಭಿಕ ಕೆಲಸ ನಡೆದಿತ್ತು. ಈ ಕಾಮಗಾರಿ ನಡೆಯುತ್ತಿದ್ದ ಸಂದರ್ಭ ಸ್ಥಳೀಯ ಪತ್ರಿಕೆಯೊಂದರಲ್ಲಿ ಗೊಂದಲದ ಹೇಳಿಕೆ ಮತ್ತು ನಂಜರಾಯಪಟ್ಟಣದ ಇಬ್ಬರು ವ್ಯಕ್ತಿಗಳು ತನ್ನ ಮತ್ತು ಹಲವು ಜನರ ಮೇಲೆ

(ಮೊದಲ ಪುಟದಿಂದ) ಪೊಲೀಸ್ ಪುಕಾರು ನೀಡಿದ ಕಾರಣ ಕೆಲಸವನ್ನು ತನ್ನ ಸೂಚನೆ ಮೇರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಕೂಡಲೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಮಳೆಗಾಲ ಪ್ರಾರಂಭಗೊಂಡಿದ್ದು ಪಟ್ಟಣದ ಹತ್ತಕ್ಕೂ ಅಧಿಕ ಬಡಾವಣೆ ನಿವಾಸಿಗಳು ಆತಂಕಕ್ಕೆ ಒಳಗಾಗಿರು ವುದು ತಮಗೆ ತಿಳಿದಿದ್ದು ವಿನಾಕಾರಣ ಕಾಮಗಾರಿಯ ಬಗ್ಗೆ ಗೊಂದಲ ಮಾಡುತ್ತಿರುವ ಬಗ್ಗೆ ಆಕ್ರೋಷ ವ್ಯಕ್ತಪಡಿಸಿದರು.ಪತ್ರಿಕೆಯೊಂದರಲ್ಲಿ ತಮ್ಮ ಬಗ್ಗೆ ಅವಹೇಳನಾಕಾರಿ ವರದಿ ಪ್ರಕಟಿಸಿರುವ ಬಗ್ಗೆ ತಾನು ನ್ಯಾಯಾಲಯದ ಮೊರೆ ಹೋಗಲಿದ್ದೇನೆ. ಆದರೆ ಸಂತ್ರಸ್ತರ ಮೇಲೆ ದೌರ್ಜನ್ಯ ಮಾಡುವುದನ್ನು ಮಾತ್ರ ತಾನು ಸಹಿಸುವುದಿಲ್ಲ ಎಂದ ರಂಜನ್ ಅವರು ತಾನು ಜನರ ಸೇವಕ, ಯಾವುದೇ ‘ಬ್ಲಾಕ್‍ಮೇಲ್’ ತಂತ್ರ ತನ್ನೊಂದಿಗೆ ನಡೆಯುವುದಿಲ್ಲ ಎಂದರು. ಅಭಿವೃದ್ಧಿ ಕೆಲಸ ಸಂದರ್ಭ ಅನಾವಶ್ಯಕ ಗೊಂದಲ ಉಂಟು ಮಾಡಿದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಳೆದ ಎರಡು ವರ್ಷಗಳ ಕಾಲ ಪಟ್ಟಣದ ಜನತೆ ಪ್ರವಾಹದಿಂದ ಅವಹೇಳನಾಕಾರಿ ವರದಿ ಪ್ರಕಟಿಸಿರುವ ಬಗ್ಗೆ ತಾನು ನ್ಯಾಯಾಲಯದ ಮೊರೆ ಹೋಗಲಿದ್ದೇನೆ. ಆದರೆ ಸಂತ್ರಸ್ತರ ಮೇಲೆ ದೌರ್ಜನ್ಯ ಮಾಡುವುದನ್ನು ಮಾತ್ರ ತಾನು ಸಹಿಸುವುದಿಲ್ಲ ಎಂದ ರಂಜನ್ ಅವರು ತಾನು ಜನರ ಸೇವಕ, ಯಾವುದೇ ‘ಬ್ಲಾಕ್‍ಮೇಲ್’ ತಂತ್ರ ತನ್ನೊಂದಿಗೆ ನಡೆಯುವುದಿಲ್ಲ ಎಂದರು. ಅಭಿವೃದ್ಧಿ ಕೆಲಸ ಸಂದರ್ಭ ಅನಾವಶ್ಯಕ ಗೊಂದಲ ಉಂಟು ಮಾಡಿದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಳೆದ ಎರಡು ವರ್ಷಗಳ ಕಾಲ ಪಟ್ಟಣದ ಜನತೆ ಪ್ರವಾಹದಿಂದ ತಹಶೀಲ್ದಾರ್ ಗೋವಿಂದರಾಜ್, ಮನವಿಯನ್ನು ತಕ್ಷಣ ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ಕೊಡುವುದರೊಂದಿಗೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಸುಮಾರು ಮೂರು ಗಂಟೆಗಳ ಕಾಲ ಕುಶಾಲನಗರ ಹಲವು ಬಡಾವಣೆಗಳ ಪ್ರವಾಹ ಸಂತ್ರಸ್ತರು ಕೊಪ್ಪ ಸೇತುವೆ ಕೆಳಭಾಗದ ನದಿ ತಟದಲ್ಲಿ ಮನವಿ ಸಲ್ಲಿಸಲು ಕಾದು ಕುಳಿತಿದ್ದ ದೃಶ್ಯ ಕಂಡುಬಂತು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು.

ಕಂದಾಯ ಇಲಾಖೆ ಅಧಿಕಾರಿಗಳು, ಕಾವೇರಿ ನದಿ ಪ್ರವಾಹ ಸಂತ್ರಸ್ತರ ವೇದಿಕೆ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್, ಗೌರವಾಧ್ಯಕ್ಷ ಎಂ.ಎಂ.ಚರಣ್, ಉಪಾಧ್ಯಕ್ಷ ತೋರೇರ ಉದಯ ಕುಮಾರ್, ಪ್ರಧಾನ ಕಾರ್ಯದರ್ಶಿ ವರದ, ಖಜಾಂಚಿ ಕೊಡಗನ ಹರ್ಷ, ಎಂಟು ಬಡಾವಣೆಗಳ ಪ್ರತಿನಿಧಿಗಳು ಮತ್ತು ನೂರಾರು ನಿವಾಸಿಗಳು ಈ ಸಂದರ್ಭ ಇದ್ದರು.