ಮಡಿಕೇರಿ, ಮೇ 18: ಕೋಟೆ ಬೆಟ್ಟ ತಪ್ಪಲಿನ ನಾಗಬಾಣೆಯ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿರುವ ಬಾಲಕಿ ಚಿಕಿತ್ಸೆಗೆ ಮಾಧ್ಯಮ ಸ್ಪಂದನ ಪ್ರಯತ್ನದಿಂದ 37,910 ರೂಪಾಯಿಗಳನ್ನು ದಾನಿಗಳು ನೀಡಿದ್ದಾರೆ.ಬಾಲಕಿ ಸ್ಥಿತಿ ಹಾಗೂ ಕುಟುಂಬದ ಕಷ್ಟದ ಬಗ್ಗೆ ಮಾಧ್ಯಮ ಸ್ಪಂದನ ತಂಡದ ವಿಶ್ವ ಕುಂಬೂರು ಬಹಿರಂಗ ಪಡಿಸಿದ್ದರು. ದಾನಿಯೊಬ್ಬರು ನೀಡಿದ 10 ಸಾವಿರ ನಗದು, ಬ್ಯಾಂಕ್ ಖಾತೆಗೆ 27,910 ರೂಪಾಯಿ ಜಮಾ ಆಗಿದೆ. ಬೆಂಗಳೂರು ಆಸ್ಪತ್ರೆಗೆ ತೆರಳಿದ್ದು, ಮಡಿಕೇರಿಯ ಕೂರ್ಗ್ ಹೋಂಡ ಶೋ ರೂಮ್ ಮಾಲೀಕ ನಿತಿನ್ ಹೊಸ ಬಟ್ಟೆ ಒದಗಿಸಿದ್ದಾರೆ. ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಹಾಗೂ ಔಷಧಿ ಉಚಿತವಾಗಿ ವ್ಯವಸ್ಥೆ ಮಾಡುವ ಭರವಸೆಯನ್ನು ಉಸ್ತುವಾರಿ ಸಚಿವ ವಿ.ಸೋಮಣ್ಣ ಮಾಧ್ಯಮ ಸ್ಪಂದನ ತಂಡಕ್ಕೆ ನೀಡಿದ್ದಾರೆ.
ವೀರಾಜಪೇಟೆ: ವೀರಾಜಪೇಟೆ ತಾಲೂಕು ವ್ಯಾಪ್ತಿಯ ತೋರ ಗ್ರಾಮದ ಕಲಾವಿದ ಮೇದರ ರಾಜು ಕುಟುಂಬಕ್ಕೆ ಮಾಧ್ಯಮ ಸ್ಪಂದನ ಮೂಲಕ ಆಹಾರ ಕಿಟ್ ಒದಗಿಸಲಾಗಿದೆ. ಸಮಸ್ಯೆ ಬಗ್ಗೆ ವಿಠಲ ಮಾಧ್ಯಮ ಸ್ಪಂದನ ಗಮನಕ್ಕೆ ತಂದಿದ್ದರು.
ವೀರಾಜಪೇಟೆಯ ನಾಸಿರ್ ಅವರು ನೀಡಿದ ಆಹಾರ ಕಿಟ್ ಅನ್ನು ಸ್ಪಂದನ ತಂಡದ ಸದಸ್ಯರು ತೋರ ಗ್ರಾಮಕ್ಕೆ ಖುದ್ದು ತೆರಳಿ ನೀಡಿದ್ದಾರೆ. ಸ್ಪಂದನ ತಂಡದ ಟಿ.ಎನ್. ಮಂಜುನಾಥ್, ಹೇಮಂತ್ ಮಾಸ್ಟರ್, ರವಿಕುಮಾರ್ ಕಿಟ್ ವಿತರಿಸಿದರು. ಜನ್ಮ ನೀಡಿದ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮಗನಿಗೆ ಮಾಧ್ಯಮ ಸ್ಪಂದನ ನೆರವಾಗಿದೆ. ವೀರಾಜಪೇಟೆ ತಾಲೂಕು ವ್ಯಾಪ್ತಿಯ ಬಿರುನಾಣಿ ನಿವಾಸಿ ಕಾಳಿಮಾಡ ಡಾಲಿ ನಂಜಪ್ಪ (75) ನಿಧನರಾಗಿದ್ದರು.
ಹಿರಿಯ ಪುತ್ರ ಜೀವನ್ ಊಟಿಯಲ್ಲಿ, ಕಿರಿಯ ಪುತ್ರ (ಯೋಧ) ರೋಷನ್ ರಾಜಸ್ಥಾನದಲ್ಲಿ ಉದ್ಯೋಗದಲ್ಲಿದ್ದಾರೆ. ಯೋಧ ರೋಷನ್ ಗೆ ತಂದೆ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಅನ್‍ಲೈನ್ ಮೂಲಕ ಪಾಸ್‍ಗೆ ಅರ್ಜಿ ಸಲ್ಲಿಸಿ ಊಟಿಯಿಂದ ಜೀವನ್ ತನ್ನ ಪತ್ನಿ, ಮಗುವಿನೊಂದಿಗೆ ಕರ್ನಾಟಕ ರಾಜ್ಯ ಪ್ರವೇಶಿಸಿದ್ದರು.
ಪಾಸ್ ಇಲ್ಲದ ಕಾರಣಕ್ಕಾಗಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಚೆಕ್ ಪೆÇೀಸ್ಟ್‍ನಲ್ಲಿ ತಡೆಯಲಾಗಿತ್ತು. ಈ ವಿಚಾರ ಮಾಧ್ಯಮ ಸ್ಪಂದನ ಗಮನಕ್ಕೆ ಬಂದಿದೆ. ಗ್ರೀನ್ ಸಿಟಿ ಫೆÇೀರಂ ಸ್ಥಾಪಾಧ್ಯಕ್ಷ ಚೈಯ್ಯಂಡ ಸತ್ಯ ಗಣಪತಿ, ಕೊಡಗು ಫಾರ್ ಟುಮಾರೊ ಸಂಸ್ಥೆಯ ಅಜ್ಜೆಟ್ಟಿರ ವಿಕ್ರಂ ಉತ್ತಪ್ಪ ಅವರ ಪ್ರಯತ್ನದಿಂದ ಗುಂಡ್ಲುಪೇಟೆಯಿಂದ ಬಿರುನಾಣಿಗೆ ಬರಲು ಅನ್ ಲೈನ್ ಮೂಲಕ ತುರ್ತಾಗಿ ಪಾಸ್ ವ್ಯವಸ್ಥೆ ಮಾಡಲಾಯಿತು.
ವೀರಾಜಪೇಟೆ : ವೀರಾಜಪೇಟೆ ತಾಲೂಕು ವ್ಯಾಪ್ತಿಯ ಬಾಳುಗೋಡಿನ ವಿಧವಾ ಮಹಿಳೆಗೆ ಮಾಧ್ಯಮ ಸ್ಪಂದನ ತಂಡದಿಂದ ಆಹಾರ ಕಿಟ್ ವಿತರಿಸಲಾಯಿತು.
* ವಿಧವಾ ಮಹಿಳೆ ಸಮಸ್ಯೆ ಬಗ್ಗೆ ಪತ್ರಕರ್ತೆ ರೇಖಾ ಗಣೇಶ್ ಸ್ಪಂದನ ತಂಡದ ಎಚ್.ಕೆ. ಜಗದೀಶ್ ಗಮನ ಸೆಳೆದಿದ್ದರು. ಪತ್ರಕರ್ತ ವಿ.ವಿ. ಅರುಣ್ ಕುಮಾರ್ ತಮ್ಮ ತಂದೆ ಹೆಸರಿನಲ್ಲಿ ಎರಡು ತಿಂಗಳಿಗೆ ಆಗುವಷ್ಟು ದಿನಸಿ ಒದಗಿಸಿದ್ದಾರೆ. ಎಚ್.ಕೆ. ಜಗದೀಶ್, ರೇಖಾ ಗಣೇಶ್ ಮನೆಗೆ ಕಿಟ್ ತಲುಪಿಸಿದರು. ಬದುಕಿನ ಕೊನೆ ಕ್ಷಣದಲ್ಲಿರುವ ತಾಯಿ ನೋಡಬೇಕೆಂಬ ಮಗಳ ಆಸೆಯನ್ನು ಕೊಡಗು ಪೆÇಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ. ಪನ್ನೇಕರ್ ಈಡೇರಿಸಿದ್ದಾರೆ.
ಜೀವನ್ಮರಣದ ನಡುವೆ ಇರುವ ತಾಯಿಯನ್ನು ವೈದ್ಯರ ಸಲಹೆ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿರುವ ಮನೆಗೆ ಕರೆದುಕೊಂಡು ಹೋಗಲಾಗಿತ್ತು. ತಾಯಿಯನ್ನು ನೋಡಬೇಕೆಂದು ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿಯಲ್ಲಿ ನೆಲೆಸಿರುವ ಪುತ್ರಿ ಎ.ರಂಜಿತಾ ಬಯಸಿದ್ದರು. ಪಾಸ್ ಪಡೆಯಲು ಪ್ರಯತ್ನಿಸಿದ್ದಾಗ, ನೋಡಲು ಹೋಗುವವರಿಗೆ ಪಾಸ್ ನೀಡುವುದಿಲ್ಲ ಎಂದು ಹಲವರು ಹೇಳಿದ್ದರು. ಸಿದ್ದಾಪುರದ ಪತ್ರಕರ್ತ ಸತೀಶ್ ನಾರಾಯಣ ಮಗಳ ಆಸೆಯನ್ನು ಮಾಧ್ಯಮ ಸ್ಪಂದನದ ಅಜ್ಜಮಾಡ ರಮೇಶ್ ಕುಟ್ಟಪ್ಪ ಗಮನಕ್ಕೆ ತಂದರು.
ಮಡಿಕೇರಿ ಡಿವೈಎಸ್ಪಿ ಬಾರಿಕೆ ದಿನೇಶ್ ಕುಮಾರ್ ಹಾಗೂ ಪೆÇಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ. ಪನ್ನೇಕರ್ ಗಮನ ಸೆಳೆದ ಹಿನ್ನೆಲೆಯಲ್ಲಿ ತಕ್ಷಣ ಪಾಸ್ ಮಂಜೂರು ಮಾಡಿದರು. ಇದರಿಂದ ರಂಜಿತಾ ತನ್ನ ತಾಯಿ ನೋಡಲು ಬೆಳ್ಳಾರೆಯತ್ತ ತೆರಳಿದರು.
* ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಅನುಕಾರ್ಯಪ್ಪ ಅವರ ಸಹಕಾರದಿಂದ ಸೇನೆಯಿಂದ ನಿವೃತ್ತರಾಗಿದ್ದ ಯೋಧರೊಬ್ಬರು ಮಧ್ಯಪ್ರದೇಶದಿಂದ ಸೋಮವಾರಪೇಟೆಗೆ ಆಗಮಿಸಿದ್ದಾರೆ.ಹವಾಲ್ದಾರ್ ಎ.ಎಲ್ ರಾಜೇಶ್ ಅವರು ಕಳೆದ ಮಾರ್ಚ್ 31 ರಂದು ಸೇನೆಯಿಂದ ನಿವೃತ್ತರಾಗಿದ್ದರು.ಆದರೆಲಾಕ್ ಡೌನ್ ಹಿನ್ನೆಲೆಯಲ್ಲಿ ಜಬ್ಬಲ್ಪುರದಲ್ಲಿ ಸೇನಾಧಿಕಾರಿಗಳು ಕಳುಹಿಸಲು ಹಿಂದೇಟು ಹಾಕಿದ್ದರು. ಅನುಕಾರ್ಯಪ್ಪ ಅವರು ಕೆ.ಜಿ.ಬೋಪಯ್ಯ ಮೂಲಕ ಸದಾನಂದಗೌಡರನ್ನು ಸಂಪರ್ಕ ಮಾಡಿದ ಪರಿಣಾಮ ಸೇನಾಧಿಕಾರಿಗಳು ಬಿಡುಗಡೆಗೊಳಿಸಿದರು. ನಂತರ ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿಗಳ ಪಾಸ್ ಬೇಕೆಂದು ಕೇಳಿದ ಕಾರಣ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಪಾಸ್ ಅನ್ನು ಸೇನಾಕೇಂದ್ರಕ್ಕೆ ಕಳುಹಿಸಿಕೊಡಲಾಯಿತು.ಇದೀಗ ರಾಜೇಶ್ ಅವರು ಸೋಮವಾರಪೇಟೆ ಮನೆಗೆ ತಲುಪಿದ್ದಾರೆ.
ಮಡಿಕೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಲ್ವರು ಕಿರಿಯ ಮಹಿಳಾ ವಕೀಲೆಯರಿಗೆ ಮಾಧ್ಯಮ ಸ್ಪಂದನ ಮೂಲಕ ಆಹಾರ ಕಿಟ್ ವಿತರಿಸಲಾಯಿತು.
ನ್ಯಾಯಾಲಯ ಕಾರ್ಯಕಲಾಪ ಇಲ್ಲದರಿಂದ ಕಿರಿಯ ವಕೀಲರು ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ಮಡಿಕೇರಿ ರಕ್ಷಣಾ ವೇದಿಕೆ ಅಧ್ಯಕ್ಷ ಅಚ್ಚಂಡಿರ ಪವನ್ ಪೆಮ್ಮಯ್ಯ ಅವರು ಮಾಧ್ಯಮ ಸ್ಪಂದನ ತಂಡದ ಗಮನ ಸೆಳೆದಿದ್ದರು.
ಸ್ಪಂದನ ತಂಡದ ಮಂಜು ಸುವರ್ಣ ಅವರ ಮನವಿ ಮೇರೆಗೆ ಗುಮ್ಮನಕೊಲ್ಲಿಯಲ್ಲಿ ಸೆಲ್ಟೆ ಅಂಡ್ ಸಾಗರ್ ಸಾಮಿಲ್ ಅಂಡ್ ವುಡ್ ಇಂಡಸ್ಟ್ರೀಸ್ ಮಾಲೀಕ ಎಂ.ಎಂ. ಶಾಹೀರ್ ಉಚಿತವಾಗಿ ನಾಲ್ಕು ಕಿಟ್ ಒದಗಿಸಿದರು. ಸ್ಪಂದನ ತಂಡದ ಅಜ್ಜಮಾಡ ರಮೇಶ್ ಕುಟ್ಟಪ್ಪ, ಸುವರ್ಣ ಮಂಜು, ಐಮಂಡ ಗೋಪಾಲ್ ಸೋಮಯ್ಯ, ಕೆ.ಎ. ಆದಿತ್ಯ, ಸುರೇಶ್ ಬಸವೇಗೌಡ ಅವರು ವಕೀಲರ ಮನೆಗಳಿಗೆ ಖುದ್ದು ತೆರಳಿ ಕಿಟ್ ವಿತರಿಸಿದರು.
* ಕೊಡಗಿನ ಮಹಿಳೆಯರಿಬ್ಬರಿಗೆ ತುರ್ತಾಗಿ ಬೇಕಾಗಿದ್ದ ಔಷಧಿಯನ್ನು ಮಾಧ್ಯಮ ಸ್ಪಂದನ ಮೂಲಕ ತಲುಪಿಸಲಾಗಿದೆ. ಪಾಲಿಬೆಟ್ಟದ ಮಹಿಳೆ ಗರ್ಭಕೋಶದ ಸಮಸ್ಯೆಗೆ ಹೋಮಿಯೋಪತಿ ಔಷಧಿ ತೆಗೆದುಕೊಳ್ಳುತ್ತಿದ್ದರು. ಔಷಧಿ ಖಾಲಿ ಆಗಿರುವ ಬಗ್ಗೆ ಮಾಧ್ಯಮ ಸ್ಪಂದನದ ಪುತ್ತಂ ಪ್ರದೀಪ್ ಗಮನಕ್ಕೆ ತಂದಿದ್ದರು. ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿರುವ ಗೌಡಳ್ಳಿಯ ಮಹಿಳೆಗೆ ಔಷಧಿ ಅಗತ್ಯತೆ ಬಗ್ಗೆ ಗೌಡಳ್ಳಿ ನಿವಾಸಿ ಅಜ್ಜಳ್ಳಿ ನವೀನ್ ಸ್ಪಂದನದ ಅಜ್ಜಮಾಡ ರಮೇಶ್ ಕುಟ್ಟಪ್ಪ ಗಮನ ಸೆಳೆದಿದ್ದರು.
ಔಷಧಿ ಅಗತ್ಯತೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಂತೆ ವ್ಯಾಪಕ ಸ್ಪಂದನ ವ್ಯಕ್ತವಾಯಿತು. ಕೊಡಗು ಸೇವಾ ಭಾರತಿ ಪ್ರಮುಖರಾದ ಉಡೋತ್ ಚಂದ್ರ ಪ್ರಯತ್ನದಿಂದ ಮಂಗಳೂರಿನಿಂದ ಹಾಗೂ ಗ್ರೀನ್ ಸಿಟಿ ಫೆÇೀರಂ ಸ್ಥಾಪಾಧ್ಯಕ್ಷ ಚೈಯ್ಯಂಡ ಸತ್ಯ ಗಣಪತಿ ಮೈಸೂರಿನಿಂದ ಔಷಧಿ ತರಿಸಿದರು.
ಮಗನೊಂದಿಗೆ ಮುನಿಸಿ ಕೊಂಡು ಶಿವಮೊಗ್ಗದಿಂದ ಮಂಗಳೂರು ಮೂಲಕ ಕೊಡಗಿಗೆ ಬಂದಿದ್ದ ಶಿವಪ್ಪ (65) ಮಾಧ್ಯಮ ಸ್ಪಂದನ ತಂಡದಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ತರಕಾರಿ, ಮಣ್ಣು ಸಾಗಾಟ ಮಾಡುವ ವಾಹನದಲ್ಲಿ ಆರು ದಿನಗಳ ಹಿಂದೆ ಶಿವಮೊಗ್ಗದಿಂದ ಕೊಡಗಿಗೆ ಬಂದಿದ್ದರು. ಮಾದಾಪುರದಿಂದ ಮಡಿಕೇರಿಯತ್ತ ನಡೆದುಕೊಂಡು ಬರುತ್ತಿದ್ದ ವೇಳೆ ಉದಯಗಿರಿಯಲ್ಲಿ ಮಾಧ್ಯಮ ಸ್ಪಂದನ ತಂಡದ ವಿಶ್ವ ಕುಂಬೂರು ಗಮನಿಸಿ ದರು.
ಮಾಧ್ಯಮ ಸ್ಪಂದನ ತಂಡದ ಸದಸ್ಯರು ಅಧಿಕಾರಿಗಳ ಗಮನ ಸೆಳೆದ ಬಳಿಕ ಸ್ಥಳಕ್ಕೆ ಮಡಿಕೇರಿ ತಹಶೀಲ್ದಾರ್ ಪಿ.ಎಸ್. ಮಹೇಶ್ ಆಗಮಿಸಿದರು. ಅದಕ್ಕೂ ಮೊದಲು ಮಾದಾಪುರ ಗ್ರಾ.ಪಂ. ಪಿಡಿಒ, ಆಶಾ ಕಾರ್ಯಕರ್ತೆ ಆಗಮಿಸಿದರು. ಸ್ಥಳೀಯ ಕಾರ್ಮಿಕರು ಊಟೋಪಚಾರದ ವ್ಯವಸ್ಥೆ ಮಾಡಿದರು. ಮಕ್ಕಂದೂರು ಗ್ರಾ.ಪಂ. ಪಿಡಿಓ ಚಂಗಪ್ಪ, ಗ್ರಾ.ಪಂ. ಸದಸ್ಯ ಬಿ.ಎನ್. ರಮೇಶ್ ಬಟ್ಟೆಗಳನ್ನು ನೀಡಿದರು.
* ಮೈಸೂರಿನ ಕೆ.ಆರ್. ನಗರದಿಂದ ನಡೆದುಕೊಂಡು ಮಡಿಕೇರಿಗೆ ಬಂದಿದ್ದ ಬುದ್ಧಿಮಾಂದ್ಯ ಮಹಿಳೆಯನ್ನು ಮಾಧ್ಯಮ ಸ್ಪಂದನ ತಂಡ ಜಿಲ್ಲಾಸ್ಪತ್ರೆಗೆ ದಾಖಲಿಸಲು ಸಫಲವಾಗಿದೆ.
ಅಶೋಕಪುರ ಜಂಕ್ಷನ್ ಅಲ್ಲಿದ್ದ ಮಹಿಳೆ ಬಗ್ಗೆ ಸ್ಪಂದನ ತಂಡಕ್ಕೆ ಸ್ಥಳೀಯರು ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಸ್ಪಂದನದ ಬಿ.ಆರ್. ಸವಿತಾ ರೈ, ಸಂತೋಷ್ ರೈ ಮಹಿಳೆ ಯೋಗಕ್ಷೇಮ ವಿಚಾರಿಸಿದರು. ಮಹಿಳೆ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಅರುಂಧತಿ ಗಮನಕ್ಕೆ ತರಲಾಯಿತು. ಸ್ಥಳಕ್ಕೆ ಆಗಮಿಸಿದ ಮಡಿಕೇರಿ ನಗರ ಠಾಣೆ ಸಬ್ ಇನ್ಸ್‍ಪೆಕ್ಟರ್ ಅಂತಿಮಾ, ಮಹಿಳೆ ಬಗ್ಗೆ ಮಾಹಿತಿ ಸಂಗ್ರಹಿಸಿದರು. ತದನಂತರ ಖಾಸಗಿ ಅಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
* ಮಡಿಕೇರಿ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಗರ್ಭಿಣಿ ಮಹಿಳೆಯನ್ನು ಮಾಧ್ಯಮ ಸ್ಪಂದನ ತಂಡದ ವಿಶ್ವ ಕುಂಬೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚುಚ್ಚುಮದ್ದು ಹಾಕಿಸಿದ್ದಾರೆ.
ಬಾಡಿಗೆ ವಾಹನ ಇಲ್ಲದರಿಂದ ಅಶ್ವಿನಿ ಆಸ್ಪತ್ರೆಗೆ ಮಹಿಳೆ ನಡೆದುಕೊಂಡು ಹೋಗುತ್ತಿದ್ದರು. ಟ್ರಾಫಿಕ್ ಪೆÇಲೀಸರು ನೀಡಿದ ಮಾಹಿತಿ ಅನ್ವಯ ಮಹಿಳೆಯನ್ನು ವಿಶ್ವ ಕುಂಬೂರು ಕಾರಿನಲ್ಲಿ ಕರೆದುಕೊಂಡು ಹೋದರು. ಚುಚ್ಚುಮದ್ದು ನೀಡಿದ ಮೇಲೆ ಕಾರಿನಲ್ಲಿ ಅವರ ಮನೆಗೆ ತಲುಪಿಸಿದರು.
* ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಸ್ಥಾಪಾಧ್ಯಕ್ಷ ಅಧ್ಯಕ್ಷ ಮಧುರ ಶೆಟ್ಟಿ ಅವರ ಪತ್ನಿಗೆ ಅಗತ್ಯವಾದ ಆಹಾರ ಕಿಟ್ ಮಾಧ್ಯಮ ಸ್ಪಂದನ ತಂಡ ಒದಗಿಸಿದೆ.
ಸ್ಪಂದನ ತಂಡದ ಪಳೆಯಂಡ ಪಾರ್ಥ ಚಿಣ್ಣಪ್ಪ ಪ್ರಯತ್ನದಿಂದ ವೀರಾಜಪೇಟೆ ಪಟ್ಟಣದ ವರ್ತಕರೊಬ್ಬರು ಉಚಿತವಾಗಿ ನೀಡಿದ್ದಾರೆ. ಸ್ಪಂದನ ತಂಡದ ಪಾರ್ಥ ಚಿಣ್ಣಪ್ಪ, ಹೇಮಂತ್ ಮಾಸ್ಟರ್ ಕಿಟ್ ವಿತರಿಸಿದರು. ಆಹಾರ ಸಮಸ್ಯೆ ಬಗ್ಗೆ ಸ್ಪಂದನ ತಂಡದ ಟಿ.ಎನ್. ಮಂಜುನಾಥ್ ಬೆಳಕಿಗೆ ತಂದಿದ್ದರು.