ಮಡಿಕೇರಿ, ಮೇ 17: ಪ್ರತಿ ವರ್ಷ ಜೂನ್ 5 ಕ್ಕೆ ‘ವಿಶ್ವ ಪರಿಸರ ದಿನಾಚರಣೆ’ಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ಬಾರಿ ‘ಜೀವಿವೈವಿಧ್ಯತೆಯನ್ನು ಆಚರಿಸೋಣ’ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿದೆ.
ಜೊತೆಗೆ ಲೇಖನ ಬರೆಯಲು ವಿಷಯಗಳು ಇಂತಿವೆ: ಜೀವಿವೈವಿಧ್ಯತೆಯ ರಕ್ಷಣೆಯಿಂದ ಮಾನವನ ಪ್ರಗತಿ, ಕೊರೋನಾ ವೈರಸ್ ಪಿಡುಗು- ನಿಸರ್ಗ ಹಾಗೂ ಜೀವಿವೈವಿಧ್ಯತೆಗೆ ವರದಾನ, ಪರಿಸರ ಸಮತೋಲನೆಯಲ್ಲಿ ಜೀವಿವೈವಿಧ್ಯತೆಯ ಪಾತ್ರ ವಿಚಾರವಾಗಿ ಲೇಖನ ಬರೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ 9008442557, 9483549159, 9880917831 ಸಂಪರ್ಕಿಸಬಹುದಾಗಿದೆ.