x

ಶನಿವಾರಸಂತೆ, ಮೇ 16: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ 1 ರಿಂದ 10 ವಯಸ್ಸಿನ ಮಕ್ಕಳಿಗೆ ‘ಎ’ ವಿಟಮಿನ್ ಸಿರಪ್ ಅನ್ನು ಹಾಕಲಾಯಿತು. ಆಲೂರು-ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಸಂಗಯ್ಯನಪುರ ಗ್ರಾಮದ ಅಂಗನವಾಗಿ ಕೇಂದ್ರದಲ್ಲಿ ಮಕ್ಕಳಿಗೆ ವಿಟಮಿನ್ ಸಿರಪ್ ಹಾಕಲಾಯಿತು.

ಈ ಸಂದರ್ಭ ಆಲೂರು-ಸಿದ್ದಾಪುರ ಪ್ರಾಥಮಿಕ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.