ಸುಂಟಿಕೊಪ್ಪ, ಮೇ 16: ವಾಹನ ಚಾಲಕರು ನೂತನವಾಗಿ ಪರವಾನಗಿ ಪಡೆಯಲು ಸಾರಿಗೆ ಇಲಾಖೆಯಿಂದ ದಿನಾಂಕ ನೀಡಲಾಗಿದ್ದು, ಲಾಕ್‍ಡೌನ್‍ನಿಂದಾಗಿ ವಾಯ್ದೆ ತುಂಬಿದ ಪರವಾನಗಿಯನ್ನು ನವೀಕರಿಸಲು ಸಾದÀ್ಯವಾಗದೆ ಪರವಾನಗಿ ರದ್ದಾಗುವ ಭೀತಿಗೆ ಚಾಲಕರು ಒಳಗಾಗಿದ್ದಾರೆ.

ಸಾರಿಗೆ ಇಲಾಖೆಯಲ್ಲಿ ಈ ಬಗ್ಗೆ ವಿಚಾರಿಸಿದಾಗ ಸರಕಾರದಿಂದ ಯಾವುದೇ ರೀತಿಯ ಸುತ್ತೋಲೆ ಬಂದಿರುವುದಿಲ್ಲ. ಲಾಕ್‍ಡೌನ್‍ನಿಂದ 2 ತಿಂಗಳ ವಿನಾಯಿತಿಯನ್ನು ನೀಡಲಾಗಿರುವ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಲಾಗಿಲ್ಲ ಎಂಬ ಉತ್ತರ ಕೇಳಿಬರುತ್ತಿದೆ. ಇದರಿಂದ ಪರವಾನಗಿ ಪಡೆಯಲು ದಿನಾಂಕಕ್ಕೆ ಕಾಯುತ್ತಿದ್ದ ಚಾಲಕರು ಅಂತಂತ್ರ ಸ್ಥಿತಿಗೆ ತಲುಪಿದ್ದಾರೆ.