ಮಡಿಕೇರಿ, ಮೇ 17 : ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ ಕೃಷಿ ಭೂಮಿ ಯಾವ ಸ್ಥಳದಲ್ಲಿದೆಯೋ, ಅದೇ ಸ್ಥಳದಲ್ಲಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವ್ಯಾಪ್ತಿಯಲ್ಲಿ ಬೆಳೆಸಾಲ ಪಡೆಯಬಹುದಾಗಿದೆ ಎಂದು ಸಹಕಾರ ಇಲಾಖೆಯ ಸಹಾಯಕ ನಿಬಂಧಕ ಎಚ್.ಡಿ.ರವಿಕುಮಾರ್ ತಿಳಿಸಿದ್ದಾರೆ.

ಜಿಲ್ಲಾಡಳಿತ ವತಿಯಿಂದ ಸಹಕಾರ ಇಲಾಖೆಗೆ ಸಂಬಂಧಿಸಿದಂತೆ ಏರ್ಪಡಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಶೂನ್ಯ ಬಡ್ಡಿದರದಲ್ಲಿ ಸಾಲ ಪಡೆಯುವ ಬಗ್ಗೆ ಕೃಷಿಕರ ಮಾಹಿತಿ ಪಡೆದರು. ಸಹಕಾರ ಸಂಘಗಳ ಮೂಲಕ ವಿತರಿಸಲಾಗುವ ಕೃಷಿ ಸಾಲ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಅಲ್ಲದೆ ಸರ್ಕಾರದ ನಿಯಮದಂತೆ ವಾಸ ಸ್ಥಳ ಮತ್ತು ಜಮೀನು ಇರುವ ಸ್ಥಳಕ್ಕೆ ಆಧಾರ್‍ನಲ್ಲಿರುವ ದಾಖಲಾತಿ ಒಂದೇ ರೀತಿ ಇದ್ದಲ್ಲಿ ಸಾಲ ದೊರೆಯಲಿದೆ ಎಂದು ರವಿಕುಮಾರ್ ಹೇಳಿದರು.

ಲೀಡ್ ಬ್ಯಾಂಕ್ ಮುಖ್ಯಸ್ಥರು ಉತ್ತರಿಸಿ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಸ್ಪಂದಿಸುವುದಾಗಿ ತಿಳಿಸಿದರು. ನೋಡಲ್ ಅಧಿಕಾರಿ ಶ್ರೀನಿವಾಸ್, ಲೀಡ್ ಬ್ಯಾಂಕ್‍ನ ರಾಮಚಂದ್ರ ನಾಯಕ್, ಸಹಕಾರ ಇಲಾಖೆಯ ಅಭಿವೃದ್ಧಿ ಅಧಿಕಾರಿ ಮೋಹನ್, ಡಿಸಿಸಿ ಬ್ಯಾಂಕಿನ ಸಾಲ ವಿಭಾಗದ ವ್ಯವಸ್ಥಾಪಕ, ಇತರರು ಇದ್ದರು.