ಮಡಿಕೇರಿ, ಮೇ 16: ಶ್ರೇಷ್ಠ ಶಿಕ್ಷಣ ತಜ್ಞ, ಗಾಂಧಿವಾದಿ, ವಿಚಾರವಾದಿ, ವಿಜ್ಞಾನಿ ಹಾಗೂ ಸಮಾಜ ಸುಧಾರಕರಲ್ಲಿ ಅಗ್ರಗಣ್ಯ ರಾಗಿದ್ದ ಡಾ. ಹೆಚ್. ನರಸಿಂಹಯ್ಯ ಅವರ ಜನ್ಮಶತಮಾನೋತ್ಸವವನ್ನು ಜೂನ್ 6 ರಂದು ಆಚರಿಸಲಾಗುತ್ತಿದೆ.

ಡಾ. ಹೆಚ್. ನರಸಿಂಹಯ್ಯ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರೂ ಆಗಿದ್ದರು. ಇವರ ಜನ್ಮಶತಮಾನೋತ್ಸವ ಅಂಗವಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ವತಿಯಿಂದ ಇಂದಿನ ಯುವ ಪೀಳಿಗೆಗೆ ಅವರ ಜೀವನ, ಸಾಧನೆ ಹಾಗೂ ಸಮಾಜಕ್ಕೆ ಅವರು ನೀಡಿದ ಅವಿಸ್ಮರಣೀಯ ಕೊಡುಗೆಗಳನ್ನು ಸ್ಮರಿಸುವ ಸಲುವಾಗಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ವಿಜ್ಞಾನಾಸಕ್ತರಿಗಾಗಿ ಲೇಖನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಅನಾಹುತಗಳು, ಡಾ. ಹೆಚ್.ಎನ್. ಅವರ ಸರಳತೆ ಮತ್ತು ಸಾಮಾಜಿಕ ಚಿಂತನೆ ಕುರಿತಾಗಿ.

ನಿಬಂಧನೆಗಳು: ಲೇಖನಗಳು 750 ಪದಗಳು ಮೀರುವಂತಿರ ಬಾರದು (ಎ 4 ಹಾಳೆಯಲ್ಲಿ), ಲೇಖನಗಳು ಕಡ್ಡಾಯವಾಗಿ ಕನ್ನಡದಲ್ಲಿರಬೇಕು. ಲೇಖನ ಬರೆಯಲು ವಯಸ್ಸಿನ ವಯೋಮಿತಿ 14 ರಿಂದ 45 ವರ್ಷದ ಒಳಗಿ ರಬೇಕು, ಲೇಖಕರು ತಮ್ಮ ಹೆಸರು, ವಿಳಾಸ, ಮೊಬೈಲ್/ ದೂರವಾಣಿ ಇ-ಮೇಲ್ ಹಾಗೂ ಉದ್ಯೋಗದ ವಿವರಗಳನ್ನು ಕಡ್ಡಾಯವಾಗಿ ನಮೂದಿಸುವುದು, ಪ್ರತಿ ವಿಷಯದ ಅತ್ಯುತ್ತಮ ಐದು ಲೇಖನಗಳಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ, ಲೇಖನಗಳನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕಚೇರಿಗೆ ಕಳುಹಿಸಲು ಕೊನೆಯ ದಿನಾಂಕ ತಾ. 31 ಆಗಿದೆ.

ಲೇಖನಗಳನ್ನು ಕಳಿಸಬೇಕಾದ ಇಮೇಲ್: ಞಡಿvಠಿ.iಟಿಜಿo@gmಚಿiಟ. ಛಿom ಅಥವಾ ವಾಟ್ಸ್‍ಅಪ್ ಸಂಖ್ಯೆ: 9483549159 ಗೆ ಕಳುಹಿಸಲು ಕೋರಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 9844405284, 9483549159, 9880917831, 9008442557 ಸಂಪರ್ಕಿಸುವಂತೆ ಅಧ್ಯಕ್ಷ ಗಿರೀಶ್ ಕಡ್ಲೇವಾಡ ಮತ್ತು ಗೌರವ ಕಾರ್ಯದರ್ಶಿಗಳಾದ ಕೃಷ್ಣೇಗೌಡ ತಿಳಿಸಿದ್ದಾರೆ.