ರೈತ ಸದಸ್ಯರ ಸಾಲದ ಮೊತ್ತವನ್ನು ಮರುಪಾವತಿಸಲು ಮತ್ತು ಹೊಸ ಸಾಲವನ್ನು ಮಂಜೂರು ಮಾಡಿಸಿಕೊಳ್ಳಲು ಕೆ.ಡಿ.ಸಿ.ಸಿ ಬ್ಯಾಂಕ್ ಮಡಿಕೇರಿಗೆ ಹೋಗುವ ಅವಶ್ಯಕತೆ ಇರುತ್ತದೆ ಹಾಗೂ ಎಲ್ಲಾ ಕಛೇರಿ ಕೆಲಸಗಳಿಗೆ ನಾವು ಮಡಿಕೇರಿಗೆ ಹೋಗಬೇಕಾಗಿರುತ್ತದೆ. ಕೊರೊನಾದ ಮೂರನೇ ಹಂತದ ಲಾಕ್ಡೌನ್ ಹಿನ್ನೆಲೆಯಲ್ಲಿ ಅಂತರ್ ಜಿಲ್ಲಾ ಪ್ರಯಾಣ ನಿಬರ್ಂಧಿಸಿ ದ.ಕ ಜಿಲ್ಲಾಡಳಿತ ಕಲ್ಲುಗುಂಡಿಯಲ್ಲಿ ಚೆಕ್ ಪೆÇೀಸ್ಟ್ ಹಾಕಿರುವುದರಿಂದ ನಮಗೆ ಮಡಿಕೇರಿಗೆ ಹೋಗುವುದು ಅಸಾಧ್ಯವಾಗಿದೆ. ಒಂದು ಬಾರಿಯ ಪಾಸ್ ಗೆ ಅರ್ಜಿ ಸಲ್ಲಿಸಿದರೆ ವಿಳಂಬವಾಗುತ್ತಿದ್ದು ಹಿಂತಿರುಗಿ ಬರುವ ಬಗ್ಗೆ ಪಾಸ್ ಇರುವುದಿಲ್ಲ. ದ.ಕ ಜಿಲ್ಲೆಯ ಮಧ್ಯದಲ್ಲಿ ಬರುವ ಪೆರಾಜೆ ಗ್ರಾಮಸ್ಥರು ಕಚೇರಿ ಕೆಲಸಗಳಿಗೆ ತೆರಳುವವರಿಗೆ ಕಲ್ಲುಗುಂಡಿಯಲ್ಲಿ ತೆರಳಲು ಅನುವು ಮಾಡಿಕೊಡಬೇಕಾಗಿ ನಮ್ಮೆಲ್ಲರ ಒತ್ತಾಯ.

- ಲೋಕೇಶ್ ಹೊದ್ದೆಟ್ಟಿ, ಪ್ರಾ.ಕೃ.ಪ.ಸ.ಸಂಘದ ಸಿಬ್ಬಂದಿ

ಕೊಡಗು ಹಸಿರು ವಲಯದಲ್ಲಿ ಇರುವುದರಿಂದ ಕೆಲ ಕಚೇರಿ, ಕಂಪೆನಿಗಳು ಪ್ರಾರಂಭಗೊಂಡಿವೆ. ನಮ್ಮ ಗ್ರಾಮದಿಂದ ಉದ್ಯೋಗದ ನಿಮಿತ್ತ ದಿನಂಪ್ರತಿ ಮಡಿಕೇರಿಗೆ ಹೋಗಿ ಬರುವವರು ಸಾಕಷ್ಟು ಜನರಿದ್ದು, ದ.ಕ ಜಿಲ್ಲೆಯ ಕಲ್ಲುಗುಂಡಿ ಚೆಕ್ ಪೆÇೀಸ್ಟ್ ನಿಂದ ಸಮಸ್ಯೆ ಉದ್ಭವಿಸಿದೆ. ಐ.ಡಿ ಕಾರ್ಡ್ ಇದ್ದರೂ ಬಿಡದೆ ಸತಾಯಿಸುತ್ತಿದ್ದಾರೆ, ಈ ಸಮಸ್ಯೆ ಬಗ್ಗೆ ಎರಡು ಜಿಲ್ಲೆಯ ಜಿಲ್ಲಾಧಿಕಾರಿಗಳು ಮಾತುಕತೆ ನಡೆಸಿ ನಮ್ಮ ಗ್ರಾಮಸ್ಥರಿಗೆ ದೈನಂದಿನ ಅಗತ್ಯ ಕೆಲಸ ಕಾರ್ಯಗಳಿಗೆ ಹೋಗಿಬರಲು ಅನುಕೂಲ ಮಾಡಿಕೊಡಬೇಕಾಗಿ ಕೋರಿಕೆ

- ಅರುಣ್ ಪೆರಾಜೆ, ಗ್ರಾಮಸ್ಥ

ದ.ಕ ಜಿಲ್ಲೆಯ ವತಿಯಿಂದ ಕಲ್ಲುಗುಂಡಿಯಲ್ಲಿ ನಿಯೋಜಿಸಿದ ಚೆಕ್ ಪೆÇೀಸ್ಟ್‍ನಿಂದ ನಮ್ಮ ಗ್ರಾಮಸ್ಥರಿಗೆ ಸಂಪಾಜೆ ಆರೋಗ್ಯ ಕೇಂದ್ರಕ್ಕೆ ಹಾಗೂ ಮಡಿಕೇರಿ ತಾಲೂಕು ಕಛೇರಿಗಳಿಗೆ ತೆರಳುವುದು ಕಷ್ಟಸಾಧ್ಯವಾಗಿದೆ. ಕೂಡಲೇ ನಮ್ಮ ಜಿಲ್ಲೆಯ ವ್ಯವಹಾರಗಳಿಗೆ ಯಾವುದೇ ಅಡೆತಡೆಗಳಿಲ್ಲದೆ ಮುಕ್ತವಾಗಿ ಸಂಚರಿಸುವಂತೆ ಜಿಲ್ಲಾಡಳಿತ ಅನುವು ಮಾಡಿಕೊಡಬೇಕಾಗಿ ಕೋರಿಕೆ.

-ಪ್ರದೀಪ್ ಕುಂಬಳಚೇರಿ, ಗ್ರಾಮಸ್ಥ