ಮಡಿಕೇರಿ, ಮೇ 17: ಕೊಡಗು ಜಿಲ್ಲೆಯಲ್ಲಿ ಕೋವಿಡ್ 19 ಕಾಯಿಲೆಯು ಮಹಾಮಾರಿಯಾಗಿ ಹರಡದಂತೆ ಕಟ್ಟೆಚ್ಚರ ವಹಿಸುತ್ತಿರುವ ಕೊಡಗು ಜಿಲ್ಲಾ ಪೆÇೀಲಿಸ್ ಇಲಾಖೆಯ ಕಾರ್ಯತತ್ಪರತೆಯನ್ನು ಜಿಲ್ಲೆಯ ಆಯುಷ್ ಸಂಘಟನೆಗಳಾದ ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೊಸಿಯೇಷನ್, ಆಯುಷ್ ಫೆಡರೇಷÀನ್ ಆಫ್ ಇಂಡಿಯಾ ಮತ್ತು ಕರ್ನಾಟಕ ಇಂಟಿಗ್ರೇಟೆಡ್ ಮೆಡಿಕಲ್ ಪ್ರಾಕ್ಟೀಷನರ್ಸ್ ಅಸೋಸಿ ಯೇಷನ್‍ಗಳು ಅಭಿನಂದಿಸಿ ಕೊರೊನಾ ವಿರುದ್ದ ಜನಜಾಗೃತಿಗಾಗಿ ಎರಡು ಬಹೂಪಯೋಗಿ ದ್ವನಿವರ್ಧಕಗಳನ್ನು ಕೊಡುಗೆಯಾಗಿ ನೀಡಿವೆ. ಇದೇ ಸಂದರ್ಭ ಪೆÇಲೀಸ್ ಸಿಬ್ಬಂದಿಯ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಉಪಯುಕ್ತವಾದ ಚ್ಯವನಪ್ರಶ್ ಅವಲೇಹ್ಯ ಮತ್ತು ಹರಿದ್ರಾ ಚೂರ್ಣಗಳನ್ನು ಕೂಡಾ ಪೆÇಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ ಪನ್ನೆಕರ್ ಅವರ ಮೂಲಕ ಇಲಾಖೆಗೆ ಹಸ್ತಾಂತರಿಸಲಾಯಿತು. ಈ ಸಂಸ್ಥೆಗಳ ಪದಾಧಿಕಾರಿಗಳಾದ ಡಾ. ರಾಜಾರಾಮ್, ಡಾ. ಕುಲಕರ್ಣಿ, ಡಾ. ಉದಯ ಶಂಕರ್ ಮತ್ತು ಆಯುಷ್ ಅಧಿಕಾರಿ ಡಾ. ರಾಮಚಂದ್ರ ಹಾಜರಿದ್ದರು.